Posts

Showing posts from April, 2016

ಅಣ್ಣ ಬಸವಣ್ಣ..

ಅಂದು ಜಗಕೆ ಬಂದನು ಬಸವ ನೊಂದ ಜನಕೆ ತಂದನು ಕಸುವ ಎಲ್ಲಿದೆ ಜನರಲಿ ಮೇಲು -ಕೀಳೆಂದ ಸಲ್ಲದು ಯಾವುದೇ  ಪ್ರಾಣಿ ಹಿಂಸೆಯೆಂದ ಶರಣರೊಡಗೂಡಿ ಮಾದರಿ ಸಂಸತ್ತು ರೂಪಿಸಿದ ಜಗದೊಳತಿಗಾಗಿ ವಚನ ಸಂವಿಧಾನವ ನೀಡಿದ ~ಪ್ರಕಾಶ್

ಗೆಳತಿ..

ಗೆಳತಿ ಏನೊಂದೂ ತಿಳಿಯದೆ ನಾನು ಸುಮ್ಮನೆ ನೋಡುತಿಹೆ ಗಗನವನು ನೀ ನನ್ನ ಬಿಟ್ಟು ಹೋದ ಆ ಕ್ಷಣ ನಂಬಲು ತಯಾರಿಲ್ಲ ಈ ಮನ ಹೃದಯ ಹೇಳಿದೆ ಇದು ಬರೀ ಪರಿಹಾಸ ಮಾಡಿಲ್ಲ ನಿನಗವಳು ಯಾವುದೇ ಮೋಸ ಬಲವಾದ ನಂಬಿಕೆ ನನಗೂ ಇದೆಯೊಂದು ನೀ ಮರಳಿ ನನ್ನೆದೆ ಗೂಡ ಬಾಗಿಲು ತಟ್ಟುವೆಯೆಂದು ~ಪ್ರಕಾಶ್

ವಸಂತಾಗಮನ..

ಹಿತ್ತಿಲಲ್ಲಿ ಹೂ ಬಿಟ್ಟಿದೆ ಬೇವಿನ ಮರ ಮನೆಯ ಡಬ್ಬದಿ ತುಂಬಿದೆ ಬೆಲ್ಲದ ಘಮ ಚಿಗುರ ತೋರಣ ತೊಟ್ಟಿದೆ ಮಾವಿನ ಮರ ದೂರದಲ್ಲಿ ಕೇಳುತಿದೆ ಕೊಕೀಲ ಗಾನ ಪ್ರಕೃತಿ ಕಾದು ನಿಂತಿದೆ ವಸಂತಾಗಮನಕೆ ಉಸಿರು ಬಿಗಿ ಹಿಡಿದು ಕಾಯುತಿದೆ ನೇಗಿಲು ನೂರು ಆಸೆ ಹೊತ್ತಿದೆ ಭೂಮಿಯ ಒಡಲು ನವ ಸಂವತ್ಸರದಿ ಭೂ ತಾಯ ಮಡಿಲು ತುಂಬುವ ಆಶಯದಿ ಬರದ ಕಹಿ ನೆನಪನು ಮರೆಸುವ ಸಿಹಿ ನಾಳೆಗಳು ಬರುವ ಕನಸಲಿ ~ಪ್ರಕಾಶ್

ಪ್ರಕೃತಿ-ಮನುಷ್ಯ

ಅಂದು ಇತ್ತು ಸುತ್ತ ಹಸಿರು ವನ. ಇಂದು ಬಿತ್ತು ಸುತ್ತ ಕಾಂಕ್ರೀಟ್ ಬನ ಇಳಿಯುತಿದೆ ದಿನವೂ ಹಸಿರಿನ ಪರಿಮಾಣ. ಏರುತಲಿದೆ ನಿತ್ಯವೂ ಹಸಿರು ಮನೆ ಪರಿಣಾಮ. ಹಸಿರು ಕಡಿಮೆ ಎಂದು ಉಸಿರು ಕಟ್ಟಿದೆ ಇಂದು  ನರರ ದುರಾಸೆ ಎಂದು ಕಾಣೋದು ಅಂತ್ಯದ ಬಿಂದು?                        ~ಪ್ರಕಾಶ್ ಮಾಯಣ್ಣವರ್

ಪ್ರೇಮ

Image