ವಸಂತಾಗಮನ..
ಹಿತ್ತಿಲಲ್ಲಿ ಹೂ ಬಿಟ್ಟಿದೆ
ಬೇವಿನ ಮರ
ಮನೆಯ ಡಬ್ಬದಿ ತುಂಬಿದೆ
ಬೆಲ್ಲದ ಘಮ
ಚಿಗುರ ತೋರಣ ತೊಟ್ಟಿದೆ
ಮಾವಿನ ಮರ
ದೂರದಲ್ಲಿ ಕೇಳುತಿದೆ
ಕೊಕೀಲ ಗಾನ
ಪ್ರಕೃತಿ ಕಾದು ನಿಂತಿದೆ
ವಸಂತಾಗಮನಕೆ
ಉಸಿರು ಬಿಗಿ ಹಿಡಿದು
ಕಾಯುತಿದೆ ನೇಗಿಲು
ನೂರು ಆಸೆ ಹೊತ್ತಿದೆ
ಭೂಮಿಯ ಒಡಲು
ನವ ಸಂವತ್ಸರದಿ
ಭೂ ತಾಯ ಮಡಿಲು
ತುಂಬುವ ಆಶಯದಿ
ಬರದ ಕಹಿ ನೆನಪನು
ಮರೆಸುವ ಸಿಹಿ ನಾಳೆಗಳು
ಬರುವ ಕನಸಲಿ
~ಪ್ರಕಾಶ್
ನಿಮ್ಮ್ ಬ್ಲಾಗ್ ನೋಡಿ ತುಂಬಾ ಖುಷಿ ayetu!!!!!
ReplyDeleteನಿಮಗೆ ಶುಭವಾಗಲಿ.
ಧನ್ಯವಾದಗಳು :)
ReplyDelete