Posts

Showing posts from July, 2016

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

Image
      ನಮ್ಮ ದೇಶದ ಸಾಹಿತ್ಯಕ್ಕೆ ರಾಮಾಯಣ, ಮಹಾಭಾರತ ಮೂಲದ್ರವ್ಯ ಎಂದು ಹೇಳಬಹುದು. ನಮ್ಮ ದೇಶದ ಯಾವುದೇ ಊರಿಗೆ ಹೋದರೂ, 'ರಾಮ ಇಲ್ಲಿ ಕೂತಿದ್ದ:, 'ಹನುಮಂತ ಇಲ್ಲಿ ವಿಶ್ರಮಿಸಿದ್ದ', 'ಲಕ್ಷಣ ಇಲ್ಲಿ ಸ್ನಾನ ಮಾಡಿದ್ದ', ಈ ರೀತಿಯ ಹಲವು ಕತೆಗಳಿರುತ್ತವೆ. ಎಲ್ಲರೊಳಗೂ ಆ ಪಾತ್ರಗಳ ಬೆರೆತುಬಿಟ್ಟಿವೆ. ಅವುಗಳಲ್ಲಿನ ಪಾತ್ರಗಳನ್ನು ಪ್ರತಿದಿನ ನಮಗೆ ಗೊತ್ತಿಲ್ಲದೆ ನೆನೆಯುತ್ತಿರುತ್ತೆವೆ. ಇದೇನಿದು 'ಹನುಮಂತನ ಬಾಲ ಇದ್ದ ಹಾಗೇ ಇದೆ', 'ನಿಂದೊಳ್ಳೆ ರಾಮಾಯಣ ಆಯ್ತು', 'ನೀನ್ ಬಿಡಪ್ಪ ಕೃಷ್ಣ ಪರಮಾತ್ಮ', 'ಶಬರಿ ಕಾದಂಗೆ ಕಾದನಲ್ಲೊ' ಹೀಗೆ ಒಂದಿಲ್ಲೊಂದು ಕಡೆ ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಸ್ಮರಿಸುತ್ತೆವೆ.      ಚಿಕ್ಕಂದಿನಿಂದಲೂ ಈ ಮಹಾಕಾವ್ಯಗಳ ಕಥೆಗಳೆಂದರೆ ಒಂದು ರೀತಿಯ ಆಕರ್ಷಣೆ ನನಗೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬೆರಗಾಗಿ ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುವ ಈ ಕೃತಿಗಳನ್ನಾಧರಿಸಿದ ಕಿರುಗತೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, 'ಸಂಪೂರ್ಣ ರಾಮಯಣ', 'ಸಂಪೂರ್ಣ ಮಹಾಭಾರತ' ಎಂಬ ಕೆಲ ಪುಸ್ತಕಗಳನ್ನು ಹೈಸ್ಕೂಲಿನಲ್ಲಿ ಓದಿದ್ದೆ, ಇತ್ತೀಚೆಗಂತೂ ತುಂಬಾ ವಿವಾದಗಳು, ಮತದ್ವೇಷಗಳನ್ನು ಕಂಡು ಮತ್ತೊಮ್ಮೆ ರಾಮಾಯಣವನ್ನು ಓದಬೇಕೆನಿಸಿತು, ಆದರೆ ಕುಮಾರವ್ಯಾಸ ಹೇಳುವಂತೆ 'ತಿಣುಕಿದನು ಫಣಿರಾಯ' ಎನ್ನುವಷ್ಟು ರಾಮಯಣಾಧ

ಹಸಿವು ಹೆಚ್ಚಿಸಿದ 'ಏಳು ರೊಟ್ಟಿಗಳು'

Image
     'ಏಳು ರೊಟ್ಟಿಗಳು' ಎಂಬ ಕಿರು ಕಾದಂಬರಿಯನ್ನು ನಿನ್ನೆ ಓದಿದೆ. ಗಣೇಶಯ್ಯನವರ ಈ ಪುಸ್ತಕ ಓದಬೇಕೆಂದು ಹುಬ್ಬಳ್ಳಿಯ ಸಪ್ನದಲ್ಲಿ ಹಾಗೂ ಕೆಲ ಕಡೆ ಹುಡುಕಾಡಿ ಕೊನೆಗೆ "ಕನ್ನಡ ಕಾದಂಬರಿಗಳ ಕೂಟ" ಎಂಬ ಗುಂಪಿನ ಸಹಾಯದಿಂದ ಈ ಪುಸ್ತಕ ಓದಲು ದೊರೆಯಿತು. ಯಾರಿಗಾದರೂ ಇದನ್ನೋದಿ ಮುಗಿಸುವ ಹೊತ್ತಿಗೆ ಹೈದರಾಬಾದಿನ ನಿಜಾಮರ ಕೋಟೆ,ಅರಮನೆಗಳನ್ನೊಮ್ಮೆ ನೋಡಬೇಕೆಂಬ ತುಡಿತ ಹುಟ್ಟುತ್ತದೆ. ಅಂತಹ ಆಸಕ್ತಿ ಹುಟ್ಟಿಸುವ ಕಾದಂಬರಿ ಇದು. ಕೆಲವು ಕಾಲ್ಪನಿಕ ಪಾತ್ರ, ಸನ್ನಿವೇಶಗಳನ್ನು ಸೃಷ್ಟಿಸಿ ಬಹುತೇಕ ನೈಜ, ಐತಿಹಾಸಿಕ ಆಧಾರಗಳ ಮೇಲೆ ರೋಚಕವಾಗಿ ಕಥೆ ಹೆಣೆದಿದ್ದಾರೆ.       ಹೈದರಾಬಾದ್ ನಿಜಾಮ ಮಹಾಯುದ್ಧದ ಸಮಯದಲ್ಲಿ, ಬ್ರಿಟಿಷರಿಗೆ ಸಾಲ ಕೊಟ್ಟಿದ್ದನೆಂದರೆ ಅವನ ಸಿರಿವಂತಿಕೆಯ ಕಲ್ಪನೆ ನಮಗಾಗಬಹುದು. ಸ್ವಾತಂತ್ರ್ಯಾನಂತರ ಹೈದರಾಭಾದ್ ವಶಪಡಿಸಿಕೊಂಡಾಗ, ನಿಜಾಮ ತನ್ನ ಅಪಾರ ಸಿರಿಯನ್ನು ಎಲ್ಲಿಗೆ ಸಾಗಿಸಲು ಯತ್ನಿಸಿದ, ಎಲ್ಲಿ ಮುಚ್ಚಿಟ್ಟ, ಪಾಕಿಸ್ತಾನ ಪ್ರೇರಿತ ಭಯೋತ್ಪಾದಕರಿಗೂ ಇದಕ್ಕೂ ಇರುವ ಸಂಬಂಧವೇನು? ನಿಜಾಮನ ನಂಬಿಕೆ, ಜಾಯಮಾನಗಳೇನು? ಮುಂತಾದ ಹಲ ವಿಚಾರಗಳನ್ನು ಈ ಕೃತಿಯಲ್ಲಿ ಲೇಖಕರು ಸವಿವರವಾಗಿ ವಿವರಿಸಿದ್ದಾರೆ.      ಈ ಕೃತಿಯ ಹೊರತರಲು ಗಣೇಶಯ್ಯನವರು ಪಟ್ಟ ಶ್ರಮ, ಅವರ ಸಂಶೋಧನಾ ಪ್ರವೃತ್ತಿ, ಅಧ್ಯಯನಶೀಲ ವ್ಯಕ್ತಿತ್ವಕ್ಕೆ ಎಷ್ಟು ವಂದಿಸಿದರೂ ಕಡಿಮೆ. ಮೂಲತಃ ಕೃಷಿ ವಿಜ್ಞಾನಿಯಾದ ಅವರು, ನಿವೃತ್ತಿ ನಂತರ

ಭೂಮಿ,ಮುಗಿಲು ಮತ್ತು ಮನುಷ್ಯ...

ಭೂಮಿಗೂ, ಮುಗಿಲಿಗೂ ಮತ್ತೆ ಜಗಳ ನಡೆದಿದೆ ಮುನಿದ ಮುಗಿಲು ಧರೆಗಿಳಿಯದೇ ಹೋಗಿದೆ ಭೂಮವ್ವನ ಇರಿಯುತಿಹ ಮನುಜ ಮಕ್ಕಳ ಪ್ರತಾಪ ಕಂಡು ಮುಗಿಲು ತೋರಿತು ಕೋಪತಾಪ ಭೂಮವ್ವನ ಹೆಂಗರಳು ಮಕ್ಕಳ ಅಟ್ಟಹಾಸ ಮರೆತು ಮುಗಿಲ ಮೇಲೆಯೇ ನಸುಕೋಪವ ತೋರಿತು ಬೇಸರದಿ ಮುಗಿಲು ಮರೆಗೆ ಹೊರಟು ಹೋಯಿತು ತಂದೆಯ ಕಾಣದೇ ಮನಷ್ಯರ ಆಕ್ರಂಧನ ಹೆಚ್ಚಿತು ಮಕ್ಕಳ ಅಳುವಿಗೆ ವಸುಧೆ ಅಸಹಾಯಕವಾಯಿತು ಮುಗಿಲ ಹೃದಯ ಮಕ್ಕಳ ನೆನಪಾಗಿ ನೊಂದಿತು ಮುನಿಸು ಕರಗಿ ಮಮತೆ ಮತ್ತೆ ಮೂಡಿತು ಕಾರ್ಮೋಡದ ದಿರಿಸು ಧರಿಸಿ ಮುಗಿಲು ಬಂದಿತು ವಾತ್ಸಲ್ಯದ ಹನಿಗಳ ಸುರಿಸುತ ಮೆಲ್ಲನೆ ಧರೆಗಿಳಿಯಿತು ಮುಗಿಲ ವಾತ್ಸಲ್ಯಕೆ ಮಕ್ಕಳ ಬಳಗ ಹರುಷದಿ ನಲಿಯಿತು ~ಪ್ರಕಾಶ್