Posts

Showing posts from January, 2017

ಭೈರಪ್ಪನವರ ಕಾದಂಬರಿ ಸಾರ್ಥ.

Image
ನಾವು ಯಾಕೆ ಇತಿಹಾಸವನ್ನು ಓದಬೇಕು? ಇತಿಹಾಸವನ್ನು ಏಕೆ ಕೆದಕಬೇಕು? ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಒಂದು ಸಲವಾದರೂ ಮೂಡಿರುತ್ತದೆ‌. ನಾ ಕಂಡುಕೊಂಡಂತೆ, ಗತಕಾಲದಲ್ಲಾದ ತಪ್ಪುಗಳಿಂದ ಪಾಠ ಕಲಿತು, ಆ ತಪ್ಪುಗಳು ಮರುಕಳಿಸದಂತೆ ಎಚ್ವರವಹಿಸುವ ಜ್ಞಾನ ಸಂಪಾದನೆ, ಹಿಂದೆ ನಡೆದ ತರಹದ ಘಟನೆಗಳು ನಮ್ಮ ಮುಂದಿನ ಬದುಕಿನಲ್ಲೂ ಸಂಭವಿಸಿದಾಗ ನಾವು ಯಾವ ರೀತಿಯ ನಿರ್ಧಾರ ತೆಗೆದುಕೊಂಡರೆ ಉತ್ತಮ, ಯಾವ ರೀತಿ ವರ್ತಿಸಿದರೆ ಉತ್ತಮ ಎಂಬ ಅರಿವಿನ ಗಳಿಕೆ, ಇತಿಹಾಸದ ಅಧ್ಯಯನದಿಂದ ಸಾಧ್ಯ. ಈ ಕಾರಣದಿಂದ ಐತಿಹಾಸಿಕ ಕಾದಂಬರಿಗಳಲ್ಲಿ ಸ್ವಲ್ಪ ಆಸಕ್ತಿ ನನಗೆ. ತರಾಸು ಅವರ ದುರ್ಗಾಸ್ತಮಾನ, ಶಿಲ್ಪಶ್ರೀ, ಭೈರಪ್ಪನವರ ಆವರಣ, ಪರ್ವ ಮುಂತಾದ ಪುಸ್ತಕಗಳನ್ನು  ಓದಿದಾಗ ಮತ್ತಷ್ಟು ಈ ರೀತಿಯ ಐತಿಹಾಸಿಕ ಕಾದಂಬರಿಗಳನ್ನೋದಬೇಕೆಂಬ ತುಡಿತ ಹೆಚ್ಚಾಯಿತು. ಈ ಹಾದಿಯಲ್ಲಿ ಇಂದು ನಾ ಓದಿದ ಕಾದಂಬರಿ ಭೈರಪ್ಪನವರು ಬರೆದ "ಸಾರ್ಥ". "ಸಾರ್ಥ" ಅಂದರೆ ನಮ್ಮ ಭರತಖಂಡದಲ್ಲಿ ಸುಮಾರು ಸಾವಿರ ವರ್ಷಗಳ ಹಿಂದೆ ನಡೆಯುತ್ತಿದ್ದ ವಾಣಿಜ್ಯ ವಹಿವಾಟಿನ ಪಯಣಕ್ಕೆ ಇದ್ದ ಹೆಸರು. ಈ ಕಾದಂಬರಿಯ ಕಥೆ ಸುಮಾರು ಕ್ರಿ. ಶ. ಎಂಟನೆ ಶತಮಾನದಲ್ಲಿ ನಡೆಯಿತೆಂದು ಊಹಿಸಿಕೊಂಡು ಬರೆದಿದ್ದು. ಇದರಲ್ಲಿ ಐತಿಹಾಸಿಕ ಕಥಾ ವಿವರಣೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಭಾರತೀಯ ಜೀವನ ದರ್ಶನಗಳ ವಿಚಾರ ಮಥನಗಳಿವೆ. ಬಹುಶಃ ಭೈರಪ್ಪನವರಲ್ಲದೆ ಬೇರೆಯವರು ಈ ತತ್ವದರ್ಶನದ ವಿಚಾರಗಳನ್ನು