Posts

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಶ್ರೀ ಗುರು ಶಂಭುಲಿಂಗದ ಪಾದಪಂಕಜ | ವೀಗೆನ್ನ ಮತಿಗೆ ಮಂಗಲವನು                  ||ಪ|| ಶ್ರೀ ಮಾಹಾದೇವಂಗೆ ಸೋಮಂಗೆ ಸುಖಪೂರ್ಣ ಧಾಮಂಗೆ ಸತ್ಯ ಚಿದ್ರೂಪಂಗೆ | ಕಾಮಿತಾ ಜನಕಲ್ಪ ಭೂಜಂಗೆ ಶಂಭುವಿಂ ಗಾಮೋದದಿಂದ ವಂದಿಸುವೆನು                  ||೧|| ಸರ್ವ ವಿದ್ಯೆಗಳಿಗೆ ಸರ್ವ ಬುದ್ಧಿಗಳಿಗೆ ಸರ್ವ ಸಿದ್ಧಿಗಳಿಗೆ ಸರ್ವಕ್ಕೆ | ಸರ್ವ ಜೀವರ ತೋರ್ಕೆಗಾದಿಕಾರಣಳಾದ ಸರ್ವ ಮಂಗಳೆಗೆ ಯಾನತನಪ್ಪೆ                  ||೨|| ಗಣವರನಣಿಮಾದಿ ಗುಣಮಣಿ  ಸಿಂಧುವಾ ರಣಮುಖನಭಿ ಮತಾರ್ಥಂಗಳ | ತಣಿವಂತೆ ಕೊಡುವದನನ್ವಿತನೀ ಕೃತಿ ಗಣುಮಾತ್ರ ವೇಡರಿಲ್ಲವೆನೆ ಮಾಳ್ಕೆ                  ||೩|| ಚಿನ್ನವಾಭರಣತೆಯಿನ್ನಾಮರೂಪ ಭೇ- ದನ್ನಿಜವೆನಿಸಿದಂತೀಶನ | ಭಿನ್ನಾಭಿದಾನ ಮೂರ್ತಿಗಳೆನಲೆಸೆವ ಸಂ ಪನ್ನಗಣಾಳಿ ರಕ್ಷಿಪುದೆನ್ನ                  ||೪|| ಕರುಣರಸದ ಕೋಡಿವರಿವ ಕಟಾಕ್ಷದ ಪರತತ್ವವರುಪುವಾಲಾಪದ | ವರಪುಣ್ಯಮಯ ಶರೀರದ ನಿರಾಭಾರಿ ಸ- ದ್ಗುರುವಿರಲೆನ್ನ ಮಾನಸದಲ್ಲಿ                  ||೫|| ಶುಕ ವಾಮದೇವಾದಿ ಸಕಲ ಮುನೀಶ್ವರ ನಿಕರವನೊಲವಿಂದೆ ಬಲಗೊಂಡು | ಅಕಲಂಕವೆನಿಸುವದ್ವೈತ ತತ್ವವನಿಲ್ಲಿ ಪ್ರಕಟಿಸುವೆನು ಬೋಧಾಗತಿಯಿಂದೆ                  ||೬|| ಅವರಿವರೆನ್ನದೆ ನಿಜವರಿದವರಂಘ್ರಿ ಗವನತನಾಗಿ  ಸಂತಸದಿಂದ | ತವೆ ರಮ್ಯವಾದುದೆಂದೆನೆ ಪೇಳ್ವೇನಧ್ಯಾತ್ಮ ಸುವಿಚಾರಗತಿಯನೀ ಕ್ರಮದಿಂದ                  ||೭|| ~ಶ್ರೀಮನ್ನಿಜಗುಣರು

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಎಲ್ಲರಿಗೂ ನಮಸ್ಕಾರ! ನಾವು ಶರೀಫರ ಹಲವು ತತ್ವಪದಗಳನ್ನ ಸಿ ಅಶ್ವತ್ಥ್, ರಘು ದೀಕ್ಷಿತ್‌ರ ಸಂಗೀತದಲ್ಲಿ ಕೇಳಿ ಆನಂದಿಸಿದ್ದೇವೆ. ಆ ಸಾಲುಗಳಲ್ಲಿ ಮೈಮರೆತಿದ್ದೇವೆ. ಅರ್ಥ ಹುಡುಕಲು ಹೋಗಿ ಕೆಲವೊಮ್ಮೆ ಸೋತಿದ್ದೇವೆ, ಕೆಲವೊಮ್ಮೆ ಅಚ್ಚರಿಗೊಂಡಿದ್ದೇವೆ. ಆದರೆ ಬಹುತೇಕ ಜನರಿಗೆ ತಿಳಿಯದ ಸಂಗತಿ ಏನೇಂದರೆ. ಶರೀಫರು ಕೇವಲ ತತ್ವಪದಗಳನ್ನಷ್ಟೇ ರಚಿಸಲಿಲ್ಲ, ಇತರ ಸಾಹಿತ್ಯ ಪ್ರಕಾರದಲ್ಲೂ ಸಾಹಿತ್ಯ ರಚಿಸಿದ್ದಾರೆ. ಆ ಸಾಹಿತ್ಯ ಬಹುತೇಕ ಅಜ್ಞಾತವಾಗಿ ಉಳಿದಿದೆ. ಹೀಗೆ ಅವರ ಸಾಹಿತ್ಯದ ಬಗ್ಗೆ ಚಿಂತನೆ ನಡೆಸುವಾಗ ನೆನಪಾಗಿದ್ದು ಶಂಕರಾಚಾರ್ಯರ "ಶಿವಾಪರಾಧ" ಸ್ತೋತ್ರ" ನಾಳೆ 'ವೈಶಾಖಮಾಸ ಶುಕ್ಲಪಕ್ಷದ ಪಂಚಮಿ' ಅಂದರೆ 'ಶಂಕರರ ಜಯಂತಿ'. ಅವರು ರಚಿಸಿದ ಈ 'ಶಿವಾಪರಾಧ ಸ್ತೋತ್ರ'ವನ್ನು ನಮ್ಮ ಶರೀಫರು ಕನ್ನಡಿಕರೀಸಿದ್ದಾರೆ. ಅದೂ ಷಟ್ಪದಿಯ ರೂಪದಲ್ಲಿ. ಈ ಕಾವ್ಯ ಅದೇಕೆ ಸಾಹಿತ್ಯ ಪ್ರೀಯರಲ್ಲಿ ಹೆಚ್ಚು ಚರ್ಚೆಗೆ ಒಳಗಾಗಲಿಲ್ಲವೋ ಗೊತ್ತಿಲ್ಲ. ಈಗ ಅದನ್ನು ಸಂಗ್ರಹಿಸಿ ನಿಮ್ಮ ಮುಂದೆ ಇಡುತ್ತಿದ್ದೇನೆ. ಏನಾದರೂ ತಪ್ಪುಗಳಿದ್ದರೆ ತಿಳಿದವರು ತಿಳಿಸಿ, ತಿದ್ದಿಕೊಳ್ಳುವೆ. ಶರೀಫರ ಆ ಕಾವ್ಯ ಕೆಳಗಿದೆ, ಓದಿ, ಅಭಿಪ್ರಾಯ ತಿಳಿಸಿ. ಧನ್ಯವಾದ ಜಯತು ಗಣಪತಿ ಜ್ಞಾನ ದಿನಮಣಿ | ಜಯತು ಸರಸ್ವತಿ ವಾಗ್ವಿಲಾಸಿನಿ | ಜಯತು ಸದ್ಗುರು ಶ್ರುತಿ ಶಿರೋಮಣಿ ಕರುಣವಾರಿಧಿಯೇ || ಜಯತು ಕವಿವರ ವ್ಯಾಸ ಮುನಿಪತಿ | ಜಯತು ವಾಲ್

ಭೈರಪ್ಪನವರ ಕಾದಂಬರಿ ಸಾರ್ಥ.

Image
ನಾವು ಯಾಕೆ ಇತಿಹಾಸವನ್ನು ಓದಬೇಕು? ಇತಿಹಾಸವನ್ನು ಏಕೆ ಕೆದಕಬೇಕು? ಎಂಬ ಪ್ರಶ್ನೆ ನಮ್ಮೆಲ್ಲರಲ್ಲಿ ಒಂದು ಸಲವಾದರೂ ಮೂಡಿರುತ್ತದೆ‌. ನಾ ಕಂಡುಕೊಂಡಂತೆ, ಗತಕಾಲದಲ್ಲಾದ ತಪ್ಪುಗಳಿಂದ ಪಾಠ ಕಲಿತು, ಆ ತಪ್ಪುಗಳು ಮರುಕಳಿಸದಂತೆ ಎಚ್ವರವಹಿಸುವ ಜ್ಞಾನ ಸಂಪಾದನೆ, ಹಿಂದೆ ನಡೆದ ತರಹದ ಘಟನೆಗಳು ನಮ್ಮ ಮುಂದಿನ ಬದುಕಿನಲ್ಲೂ ಸಂಭವಿಸಿದಾಗ ನಾವು ಯಾವ ರೀತಿಯ ನಿರ್ಧಾರ ತೆಗೆದುಕೊಂಡರೆ ಉತ್ತಮ, ಯಾವ ರೀತಿ ವರ್ತಿಸಿದರೆ ಉತ್ತಮ ಎಂಬ ಅರಿವಿನ ಗಳಿಕೆ, ಇತಿಹಾಸದ ಅಧ್ಯಯನದಿಂದ ಸಾಧ್ಯ. ಈ ಕಾರಣದಿಂದ ಐತಿಹಾಸಿಕ ಕಾದಂಬರಿಗಳಲ್ಲಿ ಸ್ವಲ್ಪ ಆಸಕ್ತಿ ನನಗೆ. ತರಾಸು ಅವರ ದುರ್ಗಾಸ್ತಮಾನ, ಶಿಲ್ಪಶ್ರೀ, ಭೈರಪ್ಪನವರ ಆವರಣ, ಪರ್ವ ಮುಂತಾದ ಪುಸ್ತಕಗಳನ್ನು  ಓದಿದಾಗ ಮತ್ತಷ್ಟು ಈ ರೀತಿಯ ಐತಿಹಾಸಿಕ ಕಾದಂಬರಿಗಳನ್ನೋದಬೇಕೆಂಬ ತುಡಿತ ಹೆಚ್ಚಾಯಿತು. ಈ ಹಾದಿಯಲ್ಲಿ ಇಂದು ನಾ ಓದಿದ ಕಾದಂಬರಿ ಭೈರಪ್ಪನವರು ಬರೆದ "ಸಾರ್ಥ". "ಸಾರ್ಥ" ಅಂದರೆ ನಮ್ಮ ಭರತಖಂಡದಲ್ಲಿ ಸುಮಾರು ಸಾವಿರ ವರ್ಷಗಳ ಹಿಂದೆ ನಡೆಯುತ್ತಿದ್ದ ವಾಣಿಜ್ಯ ವಹಿವಾಟಿನ ಪಯಣಕ್ಕೆ ಇದ್ದ ಹೆಸರು. ಈ ಕಾದಂಬರಿಯ ಕಥೆ ಸುಮಾರು ಕ್ರಿ. ಶ. ಎಂಟನೆ ಶತಮಾನದಲ್ಲಿ ನಡೆಯಿತೆಂದು ಊಹಿಸಿಕೊಂಡು ಬರೆದಿದ್ದು. ಇದರಲ್ಲಿ ಐತಿಹಾಸಿಕ ಕಥಾ ವಿವರಣೆ ಎಷ್ಟಿದೆಯೋ ಅದಕ್ಕಿಂತ ಹೆಚ್ಚು ಭಾರತೀಯ ಜೀವನ ದರ್ಶನಗಳ ವಿಚಾರ ಮಥನಗಳಿವೆ. ಬಹುಶಃ ಭೈರಪ್ಪನವರಲ್ಲದೆ ಬೇರೆಯವರು ಈ ತತ್ವದರ್ಶನದ ವಿಚಾರಗಳನ್ನು

ಚಂದಿರ ಮತ್ತು ನನ್ನವಳು...

Image
ಮುಗಿಲೂರಿನಲಿ ನಿನ್ನೆ ರಾತ್ರಿ ನಡೆಯುತ್ತಿತ್ತು ಚಂದಿರನ ಇಪ್ಪತ್ತೇಳು ಪತ್ನಿಯರ ಮೆರವಣಿಗೆ ಅದೇ ಹೊತ್ತಿಗೆ ನನ್ನವಳು ರಾತ್ರಿ ವಿಹಾರಕೆ ಬಂದಳು ಬಿದ್ದಿತವಳ ಕಾಂತಿ ಚಂದ್ರಮನ ಕಣ್ಣಿಗೆ ಮರೆತು ಬಿಟ್ಟನವನು ತನ್ನೆಲ್ಲ ಮಡದಿಯರ ವಯ್ಯಾರ ನೆಟ್ಟಿದನವನ ದೃಷ್ಟಿ ನನ್ನವಳ ಕಡೆಗೆ ಹೆಂಡಿರ ಕಣ್ತಪ್ಪಿಸಿ ಹೆಚ್ಚಿಸಿದ ಬೆಳಕನು ನನ್ನವಳ ಕಡೆಗೆ ಸೆಳೆಯಲವಳನು ತನ್ನಯ ಬಳಿಗೆ ಚಂದ್ರಮನ ಈ ಆಟವು ಬಿತ್ತು ರೋಹಿಣಿಯ ಕಣ್ಣಿಗೆ ಬೇಸರದಿ ಶಶಿ ಸರಿದ ಮೋಡಗಳ ಮರೆಗೆ ಚಂದಿರನ ಪಟ್ಟದರಸಿ ರೋಹಿಣಿಗೊ ತುಂಬು ಮತ್ಸರ ನನ್ನರಸಿಯ ಅಂದ ಚೆಂದದ ಬಗೆಗೆ ಇಬ್ಬನಿಯ ಹನಿಯು ಸೋಕಿ ನಾ ನೆನಪಾದೆ ನನ್ನ ರಾಣಿಗೆ ವಿಹಾರ ಮರೆತು ಮರಳಿದಳು ನನ್ನೆಡೆಗೆ ~ಪ್ರಕಾಶ್ ಮಾಯಣ್ಣವರ್

ಹೇಗೆ ಬರೆಯಲಿ ಕವನ....?

Image
ಹೇಳು ಹುಡುಗಿ ಹೇಗೆ ಬರೆಯಲಿ ಕವನ? ಭಾವನೆಗಳ ಬತ್ತಿಸಿದೆ, ಕನಸುಗಳ ತುಳಿದೆ. ಮನಸನು ಕೊರೆದೆ, ಎದೆಯನು ಇರಿದೆ. ಹೇಗೆ ಬರೆಯಲಿ ಕವನ? ಎದೆಗೂಡಿನ ಒಲವ ಹಕ್ಕಿ, ವಿರಹದಿ ನೊಂದು ಬೆಂದಿದೆ. ಸಂತಸ ಹಂಚುವ ರವಿಗೆ, ವಿಷಾದದ ಮೋಡ ಕವಿದಿದೆ. ಹೇಗೆ ಬರೆಯಲಿ ಕವನ? ನಲ್ಮೆಯ ಪದಗಳಲಿ, ಒಲವಿನ ರುಚಿಯಿಲ್ಲ. ಮಾತುಗಳು ಸೋತಿವೆ, ಬರೀ ಮೌನ ತುಂಬಿದೆ. ಹೇಗೆ ಬರೆಯಲಿ ಕವನ? ~ಪ್ರಕಾಶ್ ಮಾಯಣ್ಣವರ್

ಹೇ ಹುಡುಗಿ...

Image
ಹೇ ಹುಡುಗಿ... ಮರಳಿ ಮರಳಿ ಕಾಡುತಿದೆ ನೀ ಬಿಟ್ಟು ಹೋದ ನೆನಪು ಕಣ್ಣಲಿ ಅಲುಗದೆ ಕುಳಿತಿದೆ ನಿನದೆ ವಯ್ಯಾರ ಒನಪು ತೋರುತಿದೆ ನನ್ನ ಹೃದಯ ನನ್ನ ಮೇಲೆಯೆ ಮುನಿಸು ಮರೆತಿದೆ ಮನವು ಖುಷಿಯ ಕರಗುತಿದೆ ಒಲವ ಕನಸು ಬಳಿ ಬಂದು ಒಮ್ಮೆ ತೋರೇ ಈ ಮನಕೆ ಒಲವ ಸವಿಯ ಮತ್ತೊಮ್ಮೆ ಪರಿಚಯಿಸು ಬಾರೇ ಈ ಹೃದಯಕೆ ಖುಷಿಯ ರವಿಯ. ~ಪ್ರಕಾಶ್ ಮಾಯಣ್ಣವರ್

ಪೊರೆಯೋ ಶ್ರೀಕೃಷ್ಣ..

Image
ವಾಸುದೇವ ನಂದಗೋಪಾಲ ಗೋವು ಪಾಲಿಸಿದವ ನೀ ಗೋಪಾಲ ಕೊಳಲಧಾರಿ ಮುರಳಿಯೆ ಪೊರೆಯೊ ಎಮ್ಮನು ವೇಣುಗೋಪಾಲ ಗೋ ರಕ್ಷಕನೆ ಗೋವಿಂದ ಮುಕ್ತಿ ಕರುಣಿಸೋ ಮುಕುಂದ ಇಂದ್ರಿಯ ನಿಗ್ರಹಿ ಹೃಷೀಕೇಶ ನೀ ಪಸರಿಸು ಎಲ್ಲೆಡೆ ಆನಂದ ಅಸುರ ವೈರಿಯೇ ಅಸುರಾರಿ ಸುದರ್ಶನ ಧರಿಸಿದ ಶ್ರೀ ಚಕ್ರಧಾರಿ ಮುರ ವೈರಿ ನೀ ಮುರಾರಿ ಗೀತಾಚಾರ್ಯ ಜಗನ್ನಾಟಕ ಸೂತ್ರದಾರಿ ದ್ವಾರಕೆ ನಿರ್ಮಿಸಿ ಜನರ ಪೊರೆದವ ನೀ ದ್ವಾರಕಾಧೀಶ, ದ್ವಾರಕಾನಾಥ ಬೆಣ್ಣೆಯ ಕದ್ದು ತಿಂದ ನವನೀತ ನೀ ಜಗದ್ ರಕ್ಷಕ ಜಗನ್ನಾಥ ಗೋಕುಲವಾಸಿ ದೇವಕಿ ನಂದನ ಗೋಪಿಕಾಪ್ರೀಯ ಗೋಪಿಕಾನಂದನ ಮಧುವೆಂಬ ರಕ್ಕಸನ ಸೊಕ್ಕಡಗಿಸಿದ ಮಧುಸೂದನ ಕಾರ್ಮುಗಿಲ ಬಣ್ಣದವ ನೀ ಶ್ಯಾಮಸುಂದರ ಘನಶ್ಯಾಮ ಆದರ್ಶ ಪುರುಷ ನೀ ಪುರುಷೋತ್ತಮ ಭಕ್ತರ ಹೃದಯವೇ ನಿನ್ನಯ ಧಾಮ ~ಪ್ರಕಾಶ್ ಮಾಯಣ್ಣವರ್