ಪ್ರೇಮ














ಭವ್ಯ ಭವಿತವ್ಯಕೆ
ನವ್ಯ ಕವಿತ್ವಕೆ
ಜೀವಸೆಲೆ ತುಂಬುವುದು ಪ್ರೇಮ

ಬಾಳಿನ ಬೇಗುದಿಗಳ
ನಾಳಿನ ಚಿಂತೆಗಳ
ಮರೆಸುವ ಔಷಧಿ ಪ್ರೇಮ

ತೀರದ ಬಯಕೆಯ
ದೇಹದ ಜಡತ್ವವ
ನೀಗಿಸುವ ಸಂಜೀವಿನಿ ಪ್ರೇಮ

ಸುಂದರ ಬಾನಂಗಳ
ಅಂದದ ಬೆಳದಿಂಗಳ
ಚಂದದ ಚಂದ್ರನಾತ್ಮ ಪ್ರೇಮ

ಜೀವನದ ಕಡಲಿನ
ಸಂಕಟದ ಒಡಲಲಿ
ತೇಲಿಸುವ ನೌಕೆ ಪ್ರೇಮ

ಸುಂದರ ನಾಳೆಗಳ
ಒಳ್ಳೆಯ ದಿನಗಳ
ಆಶಾಭಾವದ ಕಿರಣ ಪ್ರೇಮ
 ~ಪ್ರಕಾಶ್




Comments

Post a Comment

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ