Posts

Showing posts from June, 2016

ಭೈರಪ್ಪನವರ ನಾಯಿನೆರಳು

Image
ನಾಯಿನೆರಳು ೧೯೬೮ರಲ್ಲಿ ಪ್ರಕಟವಾದ ಭೈರಪ್ಪನವರ ಕೃತಿ. ಅವರ ಕಾದಂಬರಿಗಳಲ್ಲೆ ಇದು ತೆಳುವಾದ ಕಾದಂಬರಿ ಎನ್ನಬಹುದು. ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುವ ರೀತಿ ಬಹುಜಾಣ್ಮೆಯಿಂದ ಕಥೆ ಹೆಣೆಯಲ್ಪಟ್ಟಿದೆ. ಪುನರ್ಜನ್ಮ, ಕರ್ಮಫಲ, ಪೂರ್ವಕರ್ಮ ನಮ್ಮ ನೆರಳಾಗಿ ನಾಯಿಯಂತೆ ಹಿಂಬಾಲಿಸುತ್ತದೆ ಎನ್ನುವ ಅಂಶಗಳ ಹಿನ್ನೆಲೆಯಲ್ಲಿ ಕಥಾನಕವನ್ನು ಸೃಷ್ಟಿಸಿದ್ದಾರೆ. ಭಾರತೀಯ ತತ್ವದರ್ಶನಗಳನ್ನು ಕಾದಂಬರಿಯಲ್ಲಿ ಅಳವಡಿಸಿ, ನಮ್ಮಲ್ಲಿ ಆ ಬಗ್ಗೆ ಚಿಂತನೆ ಮೂಡಿಸುವ ರೀತಿ ಬರೆಯುವುದರಲ್ಲಿ ಭೈರಪ್ಪನವರಿಗೆ ಅಗ್ರಸ್ಥಾನವನ್ನು ಕೊಡಬಹುದು. ಬಹುಶಃ ಅವರು ತತ್ವಶಾಸ್ತ್ರದ ವಿದ್ಯಾರ್ಥಿಯಾಗಿದ್ದರಿಂದ ಇದು ಸಾಧ್ಯವೆನಿಸುತ್ತದೆ. ಅವರ ವಂಶವೃಕ್ಷ, ಧರ್ಮಶ್ರೀಯಲ್ಲೂ ಭಾರತೀಯ ತತ್ವದರ್ಶನದ ಚಿಂತನೆಗಳನ್ನ ಕಂಡಿದ್ದೇನೆ. ಗಂಗಾಪುರದ ಜೋಯಿಸರ ಮನೆಯಲ್ಲಿ ಹುಟ್ಟುವ ಕ್ಷೇತ್ರಪಾಲ, ಬೆಳೆಯುತ್ತ ನನಗಾಗಲೇ ಮದುವೆಯಾಗಿದೆ, ಮಗು ಕೂಡ ಇದೆ ಅನ್ನುತ್ತಿರುತ್ತಾನೆ. ಅವನು ಹುಟ್ಟಿದಾಗಲೇ ನಾಯಿಯೊಂದು ಆ ಮನೆ ಸೇರುತ್ತದೆ. ಆ ನಾಯಿಯೊಂದೇ ಕ್ಷೇತ್ರಪಾಲನ ಸಂಗಾತಿಯಾಗಿರುತ್ತೆ.( ಇಲ್ಲಿ ಕ್ಷೇತ್ರಪಾಲನ ಫೂರ್ವಕರ್ಮವನ್ನೆ ನಾಯಿಯನ್ನಾಗಿ ಲೇಖಕರು ಸಾಂಕೇತಿಕವಾಗಿ ಸೃಷ್ಟಿಸಿದ್ದಾರೆ ಎಂದು ನನ್ನ ಭಾವನೆ.) ಹೀಗೆ ಬೆಳೆದು ೧೮ ವರ್ಷದವನಾಗುವ ಹೊತ್ತಿಗೆ, ಜೋಗಿಹಳ್ಳಿಯ ಅಚ್ಚಯ್ಯನವರು ತೀರಿಹೋದ ತಮ್ಮ ಮಗ ವಿಶ್ವೇಶ್ವರನೆ ಕ್ಷೇತ್ರಪಾಲನಾಗಿ ಮತ್ತೆ ಹುಟ್ಟಿದ್ದಾನೆ ಎಂದು ತಿಳಿದು ಗಂಗಾಪುರ

ಹಾಗೇ ನೋಡಬೇಡ ಹುಡುಗಿ

ಓರೆಗಣ್ಣಲ್ಲಿ ಹಾಗೇ ನೋಡಬೇಡ್ವೆ ಹುಡುಗಿ ಮನದಿ ಏಳುವುದು ಪ್ರೇಮದಲೆಗಳ ಸುನಾಮಿ ಕಾರ್ಮುಗಿಲ ಕಪ್ಪು ಹಚ್ಚಿದಂತ ಕಾಮನಬಿಲ್ಲಿನಂತ ಕುಡಿಹುಬ್ಬು ಒಪ್ಪವಾದ ಹೆರಳ ರಾಶಿಯನು ಕಾಣುತ ನಾನಾಗಿಹೆ ತಬ್ಬಿಬ್ಬು ಹಸಿರು ದೀಪವ ಕಂಡಾಕ್ಷಣ ವಾಹನಗಳು ನುಗ್ಗಿ ಬರುವಂತೆ ನಿನ್ನ ನೋಟ ಕೆಣಕಿದೆ ನನ್ನೆದೆಯ ನೂರು ಭಾವಗಳು ಉಕ್ಕುವಂತೆ ಇನ್ನೂಮ್ಮೆ ಕದ್ದು ನೋಡಿಬಿಡು ಮುಂಗುರುಳ ಸರಿಸುವ ನೆಪದಲಿ ನನ್ನಯ ಕಂಗಳ ಪಟಲದಿ ನಿನ್ನ ಮೊಗ ಅಳಿಯದಂತೆ ಅಚ್ಚೊತ್ತಿ ಬಿಡಲಿ ~ಪ್ರಕಾಶ್

ಭೈರಪ್ಪನವರ ವಂಶವೃಕ್ಷ

Image
     ಭೈರಪ್ಪನವರ 'ವಂಶವೃಕ್ಷ'ವನ್ನು ಓದಬೇಕೆಂಬ ಬಹುದಿನಗಳ ಆಶಯ ಇಂದಿಗೆ ತೀರಿತು. ಮೊದಲ ಕೆಲ ಪುಟಗಳಲ್ಲಿಯೇ ನಮ್ಮನ್ನಾವರಿಸಿ ಬಿಡುವ ರೀತಿ ಕಥೆ ತೆರೆದುಕೊಂಡಿದೆ. ನಮ್ಮ ಸುತ್ತಲೂ ಕಥೆ ಘಟಿಸುತ್ತಿರುವಂತೆ, ಮನೋಜ್ಞವಾಗಿ ಭೈರಪ್ಪನವರು ಚಿತ್ರಿಸಿದ್ದಾರೆ.       ಶ್ರೋತ್ರಿಯವರ ಪಾತ್ರವೇ ಕೃತಿಯಲ್ಲಿ ಪ್ರಮುಖ. ಶ್ರೋತ್ರಿಯವರ ಮಗನಾದ ನಂಜುಂಡ ಅಕಾಲಿಕ ಸಾವಿಗಿಡಾಗುವುದರೊಂದಿಗೆ ಕತೆ ಶುರುವಾಗುತ್ತದೆ. ಚಿಕ್ಕ ವಯಸ್ಸಿನ ಸೊಸೆ ಕ್ಯಾತ್ಯಾಯಿನಿ, ಒಂದು ವರ್ಷದ ಮೊಮ್ಮಗ ಚೀನಿ, ಹೆಂಡತಿ ಭಾಗೀರಥಮ್ಮ, ಮನೆಕೆಲಸದ ಲಕ್ಷ್ಮಿ, ಪ್ರೊಫೆಸರ್ ಆದ ಡಾ.ಸದಾಶಿವರಾಯರು, ಸದಾಶಿವರಾಯರ ತಮ್ಮ ರಾಜಾರಾಯ,ಹೆಂಡತಿ ನಾಗಲಕ್ಷ್ಮಿ ಅವರ ಶಿಷ್ಯೆ ಮತ್ತು ಎರಡನೆ ಹೆಂಡತಿಯಾಗಿ ಬರುವ ಕರುಣಾರತ್ನೆ, ಪ್ರತಿ ಪಾತ್ರಗಳು ನಮ್ಮನ್ನು ಕಾಡುತ್ತವೆ.       ಪ್ರತಿಯೊಂದು ಸನ್ನಿವೇಶದಲ್ಲೂ ನಮ್ಮನ್ನೂ ಯೋಚನೆಗೆ ತಳ್ಳುವಂತಹ ಅಂಶಗಳಿವೆ. ಪಾತ್ರಗಳ ತೊಳಲಾಟ ನಮ್ಮದೇ ಎನ್ನುವ ರೀತಿ ನಮ್ಮನ್ನಾವರಿಸುತ್ತದೆ. ಧರ್ಮಮಾರ್ಗವಾವುದು? ವಂಶದ ಕುಡಿ ಬರೀ ತಂದೆತಾಯಿಗಳ ಸ್ವತ್ತೇ? ಎಂಬ ಪ್ರಶ್ನೆಗಳು, ಪಾಶ್ಚಾತ್ಯ ರೀತಿಯ ಅಧ್ಯಯನ, ಭಾರತೀಯ ಧರ್ಮ, ಸಂಸ್ಕೃತಿ,ಇತಿಹಾಸ, ಶಿಲ್ಪಕಲೆ ಮುಂತಾದ ವಿಚಾರಗಳ ಬಗೆಗೆ ಚಿಂತನೆಗೆ ದೂಡುತ್ತದೆ.        ಕಾತ್ಯಾಯಿನಿಯ ಮಾನಸಿಕ ತೊಳಲಾಟ, ಸದಾಶಿವರಾಯರ ಅಸಹಾಯಕತೆ, ಕರುಣಾರತ್ನೆಯ ತ್ಯಾಗ, ಲಕ್ಷ್ಮಿಯ ನಿಷ್ಠೆ,  ಶ್ರೋತ್ರಿಯವರ ಧರ್ಮನಿಯಮಿತತೆ,