ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಶ್ರೀ ಗುರು ಶಂಭುಲಿಂಗದ ಪಾದಪಂಕಜ |
ವೀಗೆನ್ನ ಮತಿಗೆ ಮಂಗಲವನು                  ||ಪ||

ಶ್ರೀ ಮಾಹಾದೇವಂಗೆ ಸೋಮಂಗೆ ಸುಖಪೂರ್ಣ
ಧಾಮಂಗೆ ಸತ್ಯ ಚಿದ್ರೂಪಂಗೆ |
ಕಾಮಿತಾ ಜನಕಲ್ಪ ಭೂಜಂಗೆ ಶಂಭುವಿಂ
ಗಾಮೋದದಿಂದ ವಂದಿಸುವೆನು                  ||೧||

ಸರ್ವ ವಿದ್ಯೆಗಳಿಗೆ ಸರ್ವ ಬುದ್ಧಿಗಳಿಗೆ
ಸರ್ವ ಸಿದ್ಧಿಗಳಿಗೆ ಸರ್ವಕ್ಕೆ |
ಸರ್ವ ಜೀವರ ತೋರ್ಕೆಗಾದಿಕಾರಣಳಾದ
ಸರ್ವ ಮಂಗಳೆಗೆ ಯಾನತನಪ್ಪೆ                  ||೨||

ಗಣವರನಣಿಮಾದಿ ಗುಣಮಣಿ  ಸಿಂಧುವಾ
ರಣಮುಖನಭಿ ಮತಾರ್ಥಂಗಳ |
ತಣಿವಂತೆ ಕೊಡುವದನನ್ವಿತನೀ ಕೃತಿ
ಗಣುಮಾತ್ರ ವೇಡರಿಲ್ಲವೆನೆ ಮಾಳ್ಕೆ                  ||೩||

ಚಿನ್ನವಾಭರಣತೆಯಿನ್ನಾಮರೂಪ ಭೇ-
ದನ್ನಿಜವೆನಿಸಿದಂತೀಶನ |
ಭಿನ್ನಾಭಿದಾನ ಮೂರ್ತಿಗಳೆನಲೆಸೆವ ಸಂ
ಪನ್ನಗಣಾಳಿ ರಕ್ಷಿಪುದೆನ್ನ                  ||೪||

ಕರುಣರಸದ ಕೋಡಿವರಿವ ಕಟಾಕ್ಷದ
ಪರತತ್ವವರುಪುವಾಲಾಪದ |
ವರಪುಣ್ಯಮಯ ಶರೀರದ ನಿರಾಭಾರಿ ಸ-
ದ್ಗುರುವಿರಲೆನ್ನ ಮಾನಸದಲ್ಲಿ                  ||೫||

ಶುಕ ವಾಮದೇವಾದಿ ಸಕಲ ಮುನೀಶ್ವರ
ನಿಕರವನೊಲವಿಂದೆ ಬಲಗೊಂಡು |
ಅಕಲಂಕವೆನಿಸುವದ್ವೈತ ತತ್ವವನಿಲ್ಲಿ
ಪ್ರಕಟಿಸುವೆನು ಬೋಧಾಗತಿಯಿಂದೆ                  ||೬||

ಅವರಿವರೆನ್ನದೆ ನಿಜವರಿದವರಂಘ್ರಿ
ಗವನತನಾಗಿ  ಸಂತಸದಿಂದ |
ತವೆ ರಮ್ಯವಾದುದೆಂದೆನೆ ಪೇಳ್ವೇನಧ್ಯಾತ್ಮ
ಸುವಿಚಾರಗತಿಯನೀ ಕ್ರಮದಿಂದ                  ||೭||
~ಶ್ರೀಮನ್ನಿಜಗುಣರು

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ