ಪೊರೆಯೋ ಶ್ರೀಕೃಷ್ಣ..
ವಾಸುದೇವ ನಂದಗೋಪಾಲ
ಗೋವು ಪಾಲಿಸಿದವ ನೀ ಗೋಪಾಲ
ಕೊಳಲಧಾರಿ ಮುರಳಿಯೆ
ಪೊರೆಯೊ ಎಮ್ಮನು ವೇಣುಗೋಪಾಲ
ಗೋ ರಕ್ಷಕನೆ ಗೋವಿಂದ
ಮುಕ್ತಿ ಕರುಣಿಸೋ ಮುಕುಂದ
ಇಂದ್ರಿಯ ನಿಗ್ರಹಿ ಹೃಷೀಕೇಶ
ನೀ ಪಸರಿಸು ಎಲ್ಲೆಡೆ ಆನಂದ
ಅಸುರ ವೈರಿಯೇ ಅಸುರಾರಿ
ಸುದರ್ಶನ ಧರಿಸಿದ ಶ್ರೀ ಚಕ್ರಧಾರಿ
ಮುರ ವೈರಿ ನೀ ಮುರಾರಿ
ಗೀತಾಚಾರ್ಯ ಜಗನ್ನಾಟಕ ಸೂತ್ರದಾರಿ
ದ್ವಾರಕೆ ನಿರ್ಮಿಸಿ ಜನರ ಪೊರೆದವ
ನೀ ದ್ವಾರಕಾಧೀಶ, ದ್ವಾರಕಾನಾಥ
ಬೆಣ್ಣೆಯ ಕದ್ದು ತಿಂದ ನವನೀತ
ನೀ ಜಗದ್ ರಕ್ಷಕ ಜಗನ್ನಾಥ
ಗೋಕುಲವಾಸಿ ದೇವಕಿ ನಂದನ
ಗೋಪಿಕಾಪ್ರೀಯ ಗೋಪಿಕಾನಂದನ
ಮಧುವೆಂಬ ರಕ್ಕಸನ
ಸೊಕ್ಕಡಗಿಸಿದ ಮಧುಸೂದನ
ಕಾರ್ಮುಗಿಲ ಬಣ್ಣದವ ನೀ
ಶ್ಯಾಮಸುಂದರ ಘನಶ್ಯಾಮ
ಆದರ್ಶ ಪುರುಷ ನೀ ಪುರುಷೋತ್ತಮ
ಭಕ್ತರ ಹೃದಯವೇ ನಿನ್ನಯ ಧಾಮ
~ಪ್ರಕಾಶ್ ಮಾಯಣ್ಣವರ್
Comments
Post a Comment