ಚಂದಿರ ಮತ್ತು ನನ್ನವಳು...
ಮುಗಿಲೂರಿನಲಿ ನಿನ್ನೆ ರಾತ್ರಿ
ನಡೆಯುತ್ತಿತ್ತು ಚಂದಿರನ
ಇಪ್ಪತ್ತೇಳು ಪತ್ನಿಯರ ಮೆರವಣಿಗೆ
ಅದೇ ಹೊತ್ತಿಗೆ ನನ್ನವಳು
ರಾತ್ರಿ ವಿಹಾರಕೆ ಬಂದಳು
ಬಿದ್ದಿತವಳ ಕಾಂತಿ ಚಂದ್ರಮನ ಕಣ್ಣಿಗೆ
ಮರೆತು ಬಿಟ್ಟನವನು ತನ್ನೆಲ್ಲ
ಮಡದಿಯರ ವಯ್ಯಾರ
ನೆಟ್ಟಿದನವನ ದೃಷ್ಟಿ ನನ್ನವಳ ಕಡೆಗೆ
ಹೆಂಡಿರ ಕಣ್ತಪ್ಪಿಸಿ ಹೆಚ್ಚಿಸಿದ
ಬೆಳಕನು ನನ್ನವಳ ಕಡೆಗೆ
ಸೆಳೆಯಲವಳನು ತನ್ನಯ ಬಳಿಗೆ
ಚಂದ್ರಮನ ಈ ಆಟವು
ಬಿತ್ತು ರೋಹಿಣಿಯ ಕಣ್ಣಿಗೆ
ಬೇಸರದಿ ಶಶಿ ಸರಿದ ಮೋಡಗಳ ಮರೆಗೆ
ಚಂದಿರನ ಪಟ್ಟದರಸಿ
ರೋಹಿಣಿಗೊ ತುಂಬು ಮತ್ಸರ
ನನ್ನರಸಿಯ ಅಂದ ಚೆಂದದ ಬಗೆಗೆ
ಇಬ್ಬನಿಯ ಹನಿಯು ಸೋಕಿ
ನಾ ನೆನಪಾದೆ ನನ್ನ ರಾಣಿಗೆ
ವಿಹಾರ ಮರೆತು ಮರಳಿದಳು ನನ್ನೆಡೆಗೆ
ನಡೆಯುತ್ತಿತ್ತು ಚಂದಿರನ
ಇಪ್ಪತ್ತೇಳು ಪತ್ನಿಯರ ಮೆರವಣಿಗೆ
ಅದೇ ಹೊತ್ತಿಗೆ ನನ್ನವಳು
ರಾತ್ರಿ ವಿಹಾರಕೆ ಬಂದಳು
ಬಿದ್ದಿತವಳ ಕಾಂತಿ ಚಂದ್ರಮನ ಕಣ್ಣಿಗೆ
ಮರೆತು ಬಿಟ್ಟನವನು ತನ್ನೆಲ್ಲ
ಮಡದಿಯರ ವಯ್ಯಾರ
ನೆಟ್ಟಿದನವನ ದೃಷ್ಟಿ ನನ್ನವಳ ಕಡೆಗೆ
ಹೆಂಡಿರ ಕಣ್ತಪ್ಪಿಸಿ ಹೆಚ್ಚಿಸಿದ
ಬೆಳಕನು ನನ್ನವಳ ಕಡೆಗೆ
ಸೆಳೆಯಲವಳನು ತನ್ನಯ ಬಳಿಗೆ
ಚಂದ್ರಮನ ಈ ಆಟವು
ಬಿತ್ತು ರೋಹಿಣಿಯ ಕಣ್ಣಿಗೆ
ಬೇಸರದಿ ಶಶಿ ಸರಿದ ಮೋಡಗಳ ಮರೆಗೆ
ಚಂದಿರನ ಪಟ್ಟದರಸಿ
ರೋಹಿಣಿಗೊ ತುಂಬು ಮತ್ಸರ
ನನ್ನರಸಿಯ ಅಂದ ಚೆಂದದ ಬಗೆಗೆ
ಇಬ್ಬನಿಯ ಹನಿಯು ಸೋಕಿ
ನಾ ನೆನಪಾದೆ ನನ್ನ ರಾಣಿಗೆ
ವಿಹಾರ ಮರೆತು ಮರಳಿದಳು ನನ್ನೆಡೆಗೆ
~ಪ್ರಕಾಶ್ ಮಾಯಣ್ಣವರ್
Comments
Post a Comment