ಹೇಗೆ ಬರೆಯಲಿ ಕವನ....?
ಹೇಳು ಹುಡುಗಿ ಹೇಗೆ ಬರೆಯಲಿ ಕವನ?
ಭಾವನೆಗಳ ಬತ್ತಿಸಿದೆ,
ಕನಸುಗಳ ತುಳಿದೆ.
ಮನಸನು ಕೊರೆದೆ,
ಎದೆಯನು ಇರಿದೆ.
ಹೇಗೆ ಬರೆಯಲಿ ಕವನ?
ಎದೆಗೂಡಿನ ಒಲವ ಹಕ್ಕಿ,
ವಿರಹದಿ ನೊಂದು ಬೆಂದಿದೆ.
ಸಂತಸ ಹಂಚುವ ರವಿಗೆ,
ವಿಷಾದದ ಮೋಡ ಕವಿದಿದೆ.
ಹೇಗೆ ಬರೆಯಲಿ ಕವನ?
ನಲ್ಮೆಯ ಪದಗಳಲಿ,
ಒಲವಿನ ರುಚಿಯಿಲ್ಲ.
ಮಾತುಗಳು ಸೋತಿವೆ,
ಬರೀ ಮೌನ ತುಂಬಿದೆ.
ಹೇಗೆ ಬರೆಯಲಿ ಕವನ?
~ಪ್ರಕಾಶ್ ಮಾಯಣ್ಣವರ್
ಭಾವನೆಗಳ ಬತ್ತಿಸಿದೆ,
ಕನಸುಗಳ ತುಳಿದೆ.
ಮನಸನು ಕೊರೆದೆ,
ಎದೆಯನು ಇರಿದೆ.
ಹೇಗೆ ಬರೆಯಲಿ ಕವನ?
ಎದೆಗೂಡಿನ ಒಲವ ಹಕ್ಕಿ,
ವಿರಹದಿ ನೊಂದು ಬೆಂದಿದೆ.
ಸಂತಸ ಹಂಚುವ ರವಿಗೆ,
ವಿಷಾದದ ಮೋಡ ಕವಿದಿದೆ.
ಹೇಗೆ ಬರೆಯಲಿ ಕವನ?
ನಲ್ಮೆಯ ಪದಗಳಲಿ,
ಒಲವಿನ ರುಚಿಯಿಲ್ಲ.
ಮಾತುಗಳು ಸೋತಿವೆ,
ಬರೀ ಮೌನ ತುಂಬಿದೆ.
ಹೇಗೆ ಬರೆಯಲಿ ಕವನ?
~ಪ್ರಕಾಶ್ ಮಾಯಣ್ಣವರ್
Comments
Post a Comment