ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ
ಶ್ರೀ ಗುರು ಶಂಭುಲಿಂಗದ ಪಾದಪಂಕಜ | ವೀಗೆನ್ನ ಮತಿಗೆ ಮಂಗಲವನು ||ಪ|| ಶ್ರೀ ಮಾಹಾದೇವಂಗೆ ಸೋಮಂಗೆ ಸುಖಪೂರ್ಣ ಧಾಮಂಗೆ ಸತ್ಯ ಚಿದ್ರೂಪಂಗೆ | ಕಾಮಿತಾ ಜನಕಲ್ಪ ಭೂಜಂಗೆ ಶಂಭುವಿಂ ಗಾಮೋದದಿಂದ ವಂದಿಸುವೆನು ||೧|| ಸರ್ವ ವಿದ್ಯೆಗಳಿಗೆ ಸರ್ವ ಬುದ್ಧಿಗಳಿಗೆ ಸರ್ವ ಸಿದ್ಧಿಗಳಿಗೆ ಸರ್ವಕ್ಕೆ | ಸರ್ವ ಜೀವರ ತೋರ್ಕೆಗಾದಿಕಾರಣಳಾದ ಸರ್ವ ಮಂಗಳೆಗೆ ಯಾನತನಪ್ಪೆ ||೨|| ಗಣವರನಣಿಮಾದಿ ಗುಣಮಣಿ ಸಿಂಧುವಾ ರಣಮುಖನಭಿ ಮತಾರ್ಥಂಗಳ | ತಣಿವಂತೆ ಕೊಡುವದನನ್ವಿತನೀ ಕೃತಿ ಗಣುಮಾತ್ರ ವೇಡರಿಲ್ಲವೆನೆ ಮಾಳ್ಕೆ ||೩|| ಚಿನ್ನವಾಭರಣತೆಯಿನ್ನಾಮರೂಪ ಭೇ- ದನ್ನಿಜವೆನಿಸಿದಂತೀಶನ | ಭಿನ್ನಾಭಿದಾನ ಮೂರ್ತಿಗಳೆನಲೆಸೆವ ಸಂ ಪನ್ನಗಣಾಳಿ ರಕ್ಷಿಪುದೆನ್ನ ||೪|| ಕರುಣರಸದ ಕೋಡಿವರಿವ ಕಟಾಕ್ಷದ ಪರತತ್ವವರುಪುವಾಲಾಪದ | ವರಪುಣ್ಯಮಯ ಶರೀರದ ನಿರಾಭಾರಿ ಸ- ದ್ಗುರುವಿರಲೆನ್ನ ಮಾನಸದಲ್ಲಿ ||೫|| ಶುಕ ವಾಮದೇವ...