ಹೂವೊಂದು ಸೆಳೆಯುತಿದೆ...

ಹುಬ್ಬಳ್ಳಿ ಎಂಬ
ಹೂ ಬಳ್ಳಿಯಲೊಂದು
ಹೂ ಸೆಳೆಯುತಿದೆ ನನ್ನನು

ಮಲ್ಲಿಗೆಯ ಅಂದದಿ
ಸಂಪಿಗೆಯ ಚಂದದಿ
ಮೆಲ್ಲಗೆ ಬಂಧಿಸುತಿದೆ ನನ್ನನು

ಸೇವಂತಿಯ ತಂಪಿಂದ
ಜಾಜಿಯ ಕಂಪಿಂದ
ಮೋಹದಿ ಕಟ್ಟುತಿದೆ ನನ್ನನು

ಮೆಚ್ಚುವ ಬಣ್ಣದಿ
ಚುಚ್ಚುವ ಮುಳ್ಳನು ಮರೆಸಿ
ಬಳಿ ಎಳೆಯುತಿದೆ ನನ್ನನು

ಸೊಕ್ಕಿನ ಹುಡುಗಿಯ
ಬೆಕ್ಕಿನ ನಡಿಗೆಯ ಒನಪು
ಮಾಯದಿಂದ ಆವರಿಸುತಿದೆ ನನ್ನನು
~ಪ್ರಕಾಶ್ ಮಾಯಣ್ಣವರ್


Comments

Post a Comment