ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

     
ನಮ್ಮ ದೇಶದ ಸಾಹಿತ್ಯಕ್ಕೆ ರಾಮಾಯಣ, ಮಹಾಭಾರತ ಮೂಲದ್ರವ್ಯ ಎಂದು ಹೇಳಬಹುದು. ನಮ್ಮ ದೇಶದ ಯಾವುದೇ ಊರಿಗೆ ಹೋದರೂ, 'ರಾಮ ಇಲ್ಲಿ ಕೂತಿದ್ದ:, 'ಹನುಮಂತ ಇಲ್ಲಿ ವಿಶ್ರಮಿಸಿದ್ದ', 'ಲಕ್ಷಣ ಇಲ್ಲಿ ಸ್ನಾನ ಮಾಡಿದ್ದ', ಈ ರೀತಿಯ ಹಲವು ಕತೆಗಳಿರುತ್ತವೆ. ಎಲ್ಲರೊಳಗೂ ಆ ಪಾತ್ರಗಳ ಬೆರೆತುಬಿಟ್ಟಿವೆ. ಅವುಗಳಲ್ಲಿನ ಪಾತ್ರಗಳನ್ನು ಪ್ರತಿದಿನ ನಮಗೆ ಗೊತ್ತಿಲ್ಲದೆ ನೆನೆಯುತ್ತಿರುತ್ತೆವೆ. ಇದೇನಿದು 'ಹನುಮಂತನ ಬಾಲ ಇದ್ದ ಹಾಗೇ ಇದೆ', 'ನಿಂದೊಳ್ಳೆ ರಾಮಾಯಣ ಆಯ್ತು', 'ನೀನ್ ಬಿಡಪ್ಪ ಕೃಷ್ಣ ಪರಮಾತ್ಮ', 'ಶಬರಿ ಕಾದಂಗೆ ಕಾದನಲ್ಲೊ' ಹೀಗೆ ಒಂದಿಲ್ಲೊಂದು ಕಡೆ ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಸ್ಮರಿಸುತ್ತೆವೆ.

     ಚಿಕ್ಕಂದಿನಿಂದಲೂ ಈ ಮಹಾಕಾವ್ಯಗಳ ಕಥೆಗಳೆಂದರೆ ಒಂದು ರೀತಿಯ ಆಕರ್ಷಣೆ ನನಗೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬೆರಗಾಗಿ ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುವ ಈ ಕೃತಿಗಳನ್ನಾಧರಿಸಿದ ಕಿರುಗತೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, 'ಸಂಪೂರ್ಣ ರಾಮಯಣ', 'ಸಂಪೂರ್ಣ ಮಹಾಭಾರತ' ಎಂಬ ಕೆಲ ಪುಸ್ತಕಗಳನ್ನು ಹೈಸ್ಕೂಲಿನಲ್ಲಿ ಓದಿದ್ದೆ, ಇತ್ತೀಚೆಗಂತೂ ತುಂಬಾ ವಿವಾದಗಳು, ಮತದ್ವೇಷಗಳನ್ನು ಕಂಡು ಮತ್ತೊಮ್ಮೆ ರಾಮಾಯಣವನ್ನು ಓದಬೇಕೆನಿಸಿತು, ಆದರೆ ಕುಮಾರವ್ಯಾಸ ಹೇಳುವಂತೆ 'ತಿಣುಕಿದನು ಫಣಿರಾಯ' ಎನ್ನುವಷ್ಟು ರಾಮಯಣಾಧರಿತ ಕೃತಿಗಳಿವೆ, ಒಂದೊಂದರಲ್ಲಿ ಒಂದೊಂದು ಪಾತ್ರಗಳನ್ನು ವಿಜೃಂಬಿಸಲಾಗಿದೆ. ಆದ್ದರಿಂದ ಮೂಲ ಗ್ರಂಥವಾದ ವಾಲ್ಮೀಕಿ ರಾಮಾಯಣ ಓದಬೇಕೆಂಬ ತುಡಿತ ಹುಟ್ಟಿತು, ಆದರೆ ನನಗೋ ಸಂಸ್ಕೃತದ ಗಂಧ ಗಾಳಿಯು ಗೊತ್ತಿಲ್ಲ. ಎರಡು ವಾರದ ಹಿಂದೆ ಹುಬ್ಬಳ್ಳಿಯ ಸಪ್ನ ಪುಸ್ತಕಾಲಯದಲ್ಲಿ ಯಾವುದೋ ಪುಸ್ತಕ ಹುಡುಕುತ್ತಿದ್ದಾಗ, 'ಜನಪ್ರಿಯ ವಾಲ್ಮೀಕಿ ರಾಮಾಯಣ' ಎಂಬ ಪುಸ್ತಕ ನೋಡಿ, ಅದೂ ಕುವೆಂಪು ಅವರ ಅನುವಾದವೆಂದು, ಗದ್ಯರೂಪದಲ್ಲಿದೆಯೆಂದು ತಿಳಿದು ಹರ್ಷಿತನಾಗಿ ತೆಗೆದುಕೊಂಡು ಬಂದೆ.

ಕಥೆ ನಿಮಗೆಲ್ಲರಿಗೂ ಗೊತ್ತೆ ಇದೆ, ಆದ್ದರಿಂದ ನನಗೆ ಮೂಲ ವಾಲ್ಮೀಕಿ ರಾಮಯಣವನ್ನು ಓದಿದ ಮೇಲೆ ಅನ್ನಿಸಿದ್ದನ್ನು ನಿಮ್ಮ ಮುಂದೆ ಇಡುತ್ತಿದ್ದಿನಿ.

*ಭರತನಿಗೆ ರಾಮ "ನಾನು ವನವಾಸದಿಂದ ಹಿಂದೆ ಸರಿಯುವುದಿಲ್ಲ, ನಾನು ಬರುವವರೆಗೂ ರಾಜ್ಯವನ್ನು ನೋಡಿಕೊ. ಯಾವುದೇ ಕಾರಣಕ್ಕೂ ತಾಯಿ ಕೈಕಯಿಯನ್ನು ನಿಂದಿಸಬೇಡ" ಎಂದು ಆಜ್ಞಾಪಿಸುತ್ತಾನೆ. ತನ್ನ ವನವಾಸಕ್ಕೆ ಕಾರಣಳಾದವಳನ್ನೂ ಆತ ದ್ವೇಷಿಸಲಾರನೆಂದರೆ ಅದೆಂತ ಉತ್ತಮ ವ್ಯಕ್ತಿತ್ವ ಆತನದು.

*ಲಕ್ಷಣನಿಗೆ ವಾನರರು ಸೀತಾಪಹರಣದ ಸಮಯದಲ್ಲಿ ಸೀತೆ ಎಸೆದಿದ್ದ ಒಡವೆಗಳನ್ನು ತೋರಿಸಿ ಇವು ಸೀತಾಮಾತೆಯದ್ದೇನು ಪರೀಕ್ಷಿಸು ಎಂದಾಗ, ಅವನು ಅವಳ ಕಾಲುಂಗುರ ಮಾತ್ರವೇ ಗರುತಿಸುತ್ತಾನೆ, ಏಕೆಂದರೆ ಆತನೆಂದೂ ಅತ್ತಿಗೆಯ ಪಾದವನ್ನಲ್ಲದೇ ಬೇರೆನನ್ನೂ ನೋಡಿರುವುದಿಲ್ಲ. ಎಂತಹ ನಡತೆ ಆತನದು.

*ತಾಯಿಯ ದೆಸೆಯಿಂದ ಪೂರ್ತಿ ಸಾಮ್ರಾಜ್ಯವೆ ತನ್ನದಾಗಿದ್ದರೂ ತಾಯಿಯನ್ನೆ ನಿಂದಿಸಿ, ರಾಮನ ಬಳಿಗೆ ಓಡಿ ಬರುವ ಭರತನ ಗುಣವಂತೂ ಸದಾಸ್ಮರಣಿಯ.

*ಇನ್ನೂ ಸೀತಾಮಾತೆಯ ಗುಣ, ತ್ಯಾಗಗಳಂತೂ ಎಂದಿಗೂ ಮಾದರಿಯಾಗಿದೆ.

*ಹನುಮನ ಸ್ವಾಮಿ ಭಕ್ತಿ, ರಾಮ-ಸುಗ್ರೀವರ ಗೆಳೆತನ, ರಾವಣನ ಹಠ, ವಿಭೀಷಣನ ಧರ್ಮಪರತೆ ಅನನ್ಯ.

*ಹೀಗೆ ಪ್ರತಿಯೊಂದೂ ಪಾತ್ರಗಳ ಸೃಷ್ಟಿ ಅದ್ಬುತ, ಅರಣ್ಯಕಾಂಡದಲ್ಲಿ ವಿವಿಧ ವೃಕ್ಷ, ಹೂಬಳ್ಳಿ ಸಸ್ಯಗಳ ವರ್ಣನೆ ಸುಂದರವಾಗಿದೆ.

*ಮೂಲ ಕೃತಿಯ ನಂತರ ಬಂದ ರಾಮಾಯಣ ಕೃತಿಗಳಲ್ಲಿ ಅನೇಕ ಬದಲಾವಣೆಗಳಿವೆ. ಅಲಂಕಾರಿಕ ಅಂಶಗಳಿವೆ. ಉದಾಹರಣೆಗೆ ಇಲ್ಲಿ ಲಕ್ಷಣ ರೇಖೆ ಎಂಬ ಕಲ್ಪನೆಯೆ ಇಲ್ಲ, ಅದೇಲ್ಲಾ ವಾಲ್ಮೀಕಿಯ ನಂತರದ ಕವಿಗಳ ಸೃಷ್ಟಿ. ಅದೇ ರೀತಿ ಇಲ್ಲಿ ಕಥೆ ರಾಮನ ಪಟ್ಟಾಭಿಷೇಕದೊಂದಿಗೆ ಮುಗಿಯುತ್ತದೆ. ಅಂದರೆ ಸೀತಾ ವನವಾಸ, ಲವ-ಕುಶರ ಜನನ, ಅಶ್ವಮೇಧಗಳೆಲ್ಲಾ ವಾಲ್ಮೀಕಿ ರಾಮಾಯಣದಲ್ಲಿ ಇಲ್ಲ.

ಎಲ್ಲರೂ ಓದಲೇಬೇಕಾದ ಪುಸ್ತಕವಿದು, ಹೇಗೆ ಬಾಳಬೇಕೆಂಬುದರ ಕೈಪಿಡಿಯಿದು ಎಂದರೆ ತಪ್ಪಿಲ್ಲ.
~ಪ್ರಕಾಶ್

Comments

  1. ಸರ್ ನನಗೆ ತುಂಬಾ ಗೊಂದಲಕ್ಕೆ ಈಡು ಮಾಡಿರುವ ವಿಷಯವೇನೆಂದರೆ ವಿಭೀಷಣನ ಧರ್ಮ ಪರತೆಯು ಮಹಾಭಾರತದಲ್ಲಿನ ಭೀಷ್ಮ ದ್ರೋಣ ವಿದುರ ವಿಕರ್ಣ ಶಲ್ಯ ಕೃಪ ಕೃತವರ್ಮ ಮುಂತಾದವರಿಗೆ ಇತ್ಯಾದಿಗಳಿಗೆ ಏಕೆ ಬರಲಿಲ್ಲ. ನನಗೆ ತಿಳಿಯುತ್ತಿಲ್ಲ. ಭೀಮ ದ್ರೌಪದಿ ಧರ್ಮರಾಯ ಅಭಿಮನ್ಯು ಒಬ್ಬ ಪಾಂಡವರಿಗೆ ಆದ ಘೋರ ಅನ್ಯಾಯಗಳು ಧರ್ಮಪುರ ಅಲ್ಲವೇ ಅಲ್ಲ ಅಲ್ಲವೇ ಸರ್ ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ.

    ReplyDelete

Post a Comment

Popular posts from this blog

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ