ಸಾಕಾಗಿದೆ ಗೆಳತಿ ಈ ವಿರಹ..

 ಸಾಕಾಗಿದೆ ಗೆಳತಿ ಈ ವಿರಹ
 ಬೇಕಾಗಿದೆ ತುರ್ತಾಗಿ ನಿನ್ನ ಸನಿಹ

 ಮಾರುತಗಳಿಂದ ಚದುರಿ
 ದಿಕ್ಕು ತಪ್ಪಿರುವ ಮೇಘಗಳಂತೆ
 ನಿನ್ನ ನೆನಪುಗಳು ಮನದಲಿ
 ನನ್ನ ಮನದಂಗಳದಲಿ
 ಅತ್ತಿತ್ತ ಓಡಾಡುತ್ತಿವೆ

 ಸೂರ್ಯನ ಹೊಂಗಿರಣಗಳಿಗೆ
 ಕಾದಿರುವ ಮಲ್ಲಿಗೆಯ ಮೊಗ್ಗಿನಂತೆ
 ಕಾಯುತಿವೆ ನನ್ನಯ ಕಂಗಳು
 ಕಾಣಲು ಆ ಮುಂಗುರುಳು
 ಮುದ್ದಿಸುತ್ತಿರುವ ನಿನ್ನ ಮೊಗವನು
                                     ~ಪ್ರಕಾಶ್

Comments

Post a Comment

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ