ಎನ್ ಚೆಂದ ಅದಾಳೋ ಆಕಿ....!

ಏನ್ ಚೆಂದ ಅದಾಳೋ ಆಕಿ...!

ಮುತ್ತಿನ ಮೂಗುತಿ ಹಾಕ್ಕೊಂಡು
ಇಳಕಲ್ ಸೀರಿ ಉಟ್ಟ್ಕೊಂಡು
ಮೈತುಂಬ ಬೆಳದಿಂಗಳ ತುಂಬ್ಕೊಂಡು
ಬಂದಾಳ ಕನಸನ್ಯಾಗ ಚಂದ್ರನ ತುಂಡು

ಹಸಿರು ಬಳೆಗಳ ಸಪ್ಪಳ ಮಾಡಿ
ಬೆಳ್ಳಿ ಗೆಜ್ಜಿಲೇ ನಾದ ಹೊರಡಿಸ್ತಾಳ
ಓರೆಗಣ್ಣೊಳಗ ಕಾಡೊಹಾಂಗ ನೋಡಿ
ನೋಡೊ ನೋಟದಾಗ ಸಂದೇಶ ಕೊಡ್ತಾಳ

ನಗುವಿನ ಒಡವಿ ಹಾಕ್ಕೊಂಡು
ನಾಚಿಕೆಯ ಅರಿವೆ ಹೊದ್ಕೊಂಡು
ಮಲ್ಲಿಗಿ ಮಾಲಿ ಮುಡ್ಕೊಂಡು
ಹೋದ್ಳು ನನ್ನ ಮನಸು ಹೊಡ್ಕೊಂಡು..
~ಪ್ರಕಾಶ್ ಮಾಯಣ್ಣವರ್ 

Comments

Post a Comment

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ