ಇಳಿಸಂಜೆಯ ಹೊತ್ತಲ್ಲಿ...

ಇಳಿಸಂಜೆಯ ಹೊತ್ತಲ್ಲಿ...

ನಲ್ಲೆಯ ಕಿರುಬೆರಳಿಗೆ 
ತನ್ನ ಕಿರುಬೆರಳನು
ಸೇರಿಸಿ ನಿಧಾನದಿ ನಲ್ಲ ನಡೆದಿದ್ದ

ಈ ಪ್ರೇಮಿಗಳ ಪ್ರೇಮದ
ಮೆರವಣಿಗೆ ಕಂಡು
ಮುಗಿಲು ಆನಂದ ಬಾಷ್ಪ ಸುರಿಸಿತ್ತು

ಮುಗಿಲ ಸುರಿಸಿದ
ಹನಿಗಳು ತಾಕಿ
ನಡುಗಿದ ನಲ್ಲೆ ನಲ್ಲನ ಬಿಗಿದಪ್ಪಿದಳು

ಪ್ರೇಮೊನ್ಮಾದದ ಕ್ಷಣವನು 
ಕಣ್ತುಂಬಿಕೊಳ್ಳುವ ಆಸೆಯಿಂದ
ಮಿಂಚೊಂದ ಹರಿಸಿತು ಮುಗಿಲು

ಮೇಘಗಳ ಮರೆಯಿಂದ
ನೇಸರನು ಇಣುಕಿದ
ಈ ಅದ್ಬುತವ ಮನದುಂಬಿ ಆಸ್ವಾದಿಸಲು

ಹಕ್ಕಿಗಳು ಕಲರವದಲ್ಲಿ
ಮರಗಳು ಹೂವನು ಚೆಲ್ಲಿ
ತಮಗಾದ ಸಂತಸವ ತೋರಿದವು
~ಪ್ರಕಾಶ್ ಮಾಯಣ್ಣವರ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ