ಬೇಡ ಗೆಳತಿ ನೀ ಹತ್ತಿರ ಬರಬೇಡ...

ಬೇಡ ಗೆಳತಿ ನೀ ಹತ್ತಿರ ಬರಬೇಡ

ನೀ ಬಳಿ ಬಂದಾಗ
ಹೃದಯ ಬಡಿಯದು
ನಿನ್ನುಸಿರು ತಾಕಿದಾಗ
ಉಸಿರಾಟ ನಿಲ್ಲುವುದು

ನಿನ್ನ ಸನಿಹ
ಜಗವ ಮರೆಸುವುದು
ನಿನ್ನ ವಿನಹ
ಬೇರೇನೂ ಕಾಣಿಸದು

ನಿನ್ನ ಸ್ಪರ್ಶ
ನನ್ನ ನಿಸ್ತೇಜಗೊಳಿಸುವುದು
ನಿನ್ನ ಮಾತು
ನನ್ನ ಮೂಕನನ್ನಾಗಿಸುವುದು

ಬೇಡ ಹುಡುಗಿ
ದಯಮಾಡಿ ಬಳಿ ಬರಬೇಡ
ಬಡಪಾಯಿ ಹುಡುಗನ
ಒಲವ ಸಿಹಿಯಿಂದ ಕೊಲ್ಲಬೇಡ
-ಪ್ರಕಾಶ್ ಮಾಯಣ್ಣವರ್

Comments

Post a Comment

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ