ನಲ್ಲೆ ಈ ಹುಣ್ಣಿಮೆ ರಾತ್ರಿಯಲಿ..
ನಲ್ಲೆ ಈ ಹುಣ್ಣಿಮೆ ರಾತ್ರಿಯಲಿ..
ಹುಸಿ ಮುನಿಸ ತೋರಿ
ನಿನ್ನ ಬಿಟ್ಟು ನಾ
ತುಸು ದೂರ
ನಿಂತಿರುವುದ ಕಂಡು
ಚಂದಿರ ಒಳಗೊಳಗೆ
ಹಿಗ್ಗಿ ನಿನ್ನ ಸುತ್ತ
ಬೆಳದಿಂಗಳು ಹರಡಿ
ಆಕರ್ಷಿಸಲೆತ್ನಿಸಿದ
ಹೊಟ್ಟೆಕಿಚ್ಚಿನಿಂದ
ಮೇಘಗಳು ಓಡಿ ಬಂದು
ಚಂದ್ರನ ಮರೆಯಾಗಿಸಿ
ಮಳೆ ಹನಿಗಳ ಸುರಿದವು
ಮೇಘಗಳ ನಡುವೆಯೆ
ನಿನ್ನ ಸ್ಪರ್ಶಕಾಗಿ
ನಡೆದ ಮಾತಿನ ಸಮರವು
ಗುಡುಗಾಗಿ ಕೇಳುತಿದೆ
~ಪ್ರಕಾಶ್ ಮಾಯಣ್ಣವರ್
ಹುಸಿ ಮುನಿಸ ತೋರಿ
ನಿನ್ನ ಬಿಟ್ಟು ನಾ
ತುಸು ದೂರ
ನಿಂತಿರುವುದ ಕಂಡು
ಚಂದಿರ ಒಳಗೊಳಗೆ
ಹಿಗ್ಗಿ ನಿನ್ನ ಸುತ್ತ
ಬೆಳದಿಂಗಳು ಹರಡಿ
ಆಕರ್ಷಿಸಲೆತ್ನಿಸಿದ
ಹೊಟ್ಟೆಕಿಚ್ಚಿನಿಂದ
ಮೇಘಗಳು ಓಡಿ ಬಂದು
ಚಂದ್ರನ ಮರೆಯಾಗಿಸಿ
ಮಳೆ ಹನಿಗಳ ಸುರಿದವು
ಮೇಘಗಳ ನಡುವೆಯೆ
ನಿನ್ನ ಸ್ಪರ್ಶಕಾಗಿ
ನಡೆದ ಮಾತಿನ ಸಮರವು
ಗುಡುಗಾಗಿ ಕೇಳುತಿದೆ
~ಪ್ರಕಾಶ್ ಮಾಯಣ್ಣವರ್
Comments
Post a Comment