ಹಾಗೇ ನೋಡಬೇಡ ಹುಡುಗಿ

ಓರೆಗಣ್ಣಲ್ಲಿ ಹಾಗೇ ನೋಡಬೇಡ್ವೆ ಹುಡುಗಿ
ಮನದಿ ಏಳುವುದು ಪ್ರೇಮದಲೆಗಳ ಸುನಾಮಿ

ಕಾರ್ಮುಗಿಲ ಕಪ್ಪು ಹಚ್ಚಿದಂತ
ಕಾಮನಬಿಲ್ಲಿನಂತ ಕುಡಿಹುಬ್ಬು
ಒಪ್ಪವಾದ ಹೆರಳ ರಾಶಿಯನು
ಕಾಣುತ ನಾನಾಗಿಹೆ ತಬ್ಬಿಬ್ಬು

ಹಸಿರು ದೀಪವ ಕಂಡಾಕ್ಷಣ
ವಾಹನಗಳು ನುಗ್ಗಿ ಬರುವಂತೆ
ನಿನ್ನ ನೋಟ ಕೆಣಕಿದೆ ನನ್ನೆದೆಯ
ನೂರು ಭಾವಗಳು ಉಕ್ಕುವಂತೆ

ಇನ್ನೂಮ್ಮೆ ಕದ್ದು ನೋಡಿಬಿಡು
ಮುಂಗುರುಳ ಸರಿಸುವ ನೆಪದಲಿ
ನನ್ನಯ ಕಂಗಳ ಪಟಲದಿ ನಿನ್ನ
ಮೊಗ ಅಳಿಯದಂತೆ ಅಚ್ಚೊತ್ತಿ ಬಿಡಲಿ
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ