ತಂಗಾಳಿ-ಶೋಕ
ಮುಂಜಾನೆಯ ತಂಗಾಳಿ
ಶೋಕಕೆ ದೂಡಿದೆ ನನ್ನನು
ತರಗೆಲೆಯೊಂದು ಹಾರಿ
ಬಂದು ನೆನಪಿಸಿದೆ ನಿನ್ನನು
ಹಿತವಾದ ತಂಗಾಳಿಗೆ
ಪುಳಕಗೊಂಡಿದ್ದೆ ಆ ದಿನ
ಎಲ್ಲ ಜಂಜಡಗಳ ತುಸು
ಮರೆತು ನಲಿದಿತ್ತು ಮನ
ನಗುತಿದ್ದ ಕಮಲವನು
ಯಾರೋ ತುಳಿದು ಹೋದಂತೆ
ನಲಿಯುತ್ತಿದ್ದ ಮನಕೆ
ಎರಗಿತೊಂದು ಸುದ್ದಿ ಸಿಡಿಲಿನಂತೆ
ಏಕಾಂಗಿಯಾಗಿಸಿ ನನ್ನನು
ಏಕೆ ಹೊರಟು ಬಿಟ್ಟೆ ನೀನು
ನನ್ನ ಹೊರತು ಆ ನಾಕ
ನಿನಗೆ ನೆಮ್ಮದಿ ಅನಿಸುವುದೇನು?
ಈ ತಂಪು ತಂಗಾಳಿಗೂ
ಜೀವ ಬೇಯುತಿದೆ ಈಗ
ವಿರಹದ ಉರಿ ಅಗ್ನಿಗೆ
ತುಪ್ಪವಾಗಿದೆ ತಂಗಾಳಿಯಿಗ
~ಪ್ರಕಾಶ್
Comments
Post a Comment