ಗೆಳತಿ.. ಮೊದಲ ಮಳೆಯಲಿ ನೆನದ ಹಾಗೆ!

ಗೆಳತಿ

ಮರೀಚಿಕೆ ನೀ ನನ್ನ ಪಾಲಿಗೆ
ಎಂದು ತಿಳಿದೆದ್ದೆ ನಾನು
ನನ್ನ ಊಹಾಪೋಹಗಳನ್ನೆಲ್ಲಾ
ತಪ್ಪೆಂದು ತೋರಿಸಿದೆ ನೀನು 

ಮೊದಲ ಮಳೆಯಲಿ ನೆನೆದು
ಪುಳಕಗೊಳ್ಳುವ  ತರಹ
ನನ್ನ ಮನವನರಳಿಸುತಿದೆ
ನಿನ್ನಯ ಈ ಸನಿಹ

ಮೊದಲ ವರ್ಷಧಾರೆಗೆ ಮಣ್ಣು 
ಕಂಪು ಬೀರಿದ ಹಾಗೆ
ನಿನ್ನ ಒಲುಮೆಯು ನನ್ನಯ
ಮನದಿ ಹರಡಿದೆ ಹೀಗೆ

ಹೊಂಬಿಸಿಲ ಕಿರಣ ಮಳೆಹನಿಗೆ
ವಜ್ರದ ಹೊಳಪು ನೀಡಿದಂತೆ
ನನ್ನ ನಿಸ್ತೇಜ ಬದುಕಿಗೆ ಹೊಸ
ದಿಕ್ಕು ನೀ ತೋರಿದೆ ಕಾಂತೆ
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ