ಗೆಳತಿ ಬೇಡೆನಗೆ ನಿನ್ನಂದ ಚೆಂದದ ವಯ್ಯಾರ ಓನಪು ಸಾಕೆನಗೆ ನೀ ನನಗೆ ನೀಡಿದ ಒಲವ ನೆನಪು ಬೇಡೆನಗೆ ನಿನ್ನ ಒಡವೆ- ಸೌಗಂಧಗಳ ಬಗೆ ಬಗೆ ಸಿಂಗಾರ ಸಾಕೆನಗೆ ನಿನ್ನ ಮೊಗದಲೊಂದು ನಗು, ಅದೇ ಬಂಗಾರ ಬೇಡೆನಗೆ ನಿನ್ನಾವ ಧನ ಕನಕ ಮತ್ಯಾವ ಅಂತಸ್ತು ಸಾಕೆನಗೆ ನಿನ್ನೊಲುಮೆ ಅದೇ ದೊಡ್ಡ ಸಂಪತ್ತು ~ಪ್ರಕಾಶ್
ನಮ್ಮ ದೇಶದ ಸಾಹಿತ್ಯಕ್ಕೆ ರಾಮಾಯಣ, ಮಹಾಭಾರತ ಮೂಲದ್ರವ್ಯ ಎಂದು ಹೇಳಬಹುದು. ನಮ್ಮ ದೇಶದ ಯಾವುದೇ ಊರಿಗೆ ಹೋದರೂ, 'ರಾಮ ಇಲ್ಲಿ ಕೂತಿದ್ದ:, 'ಹನುಮಂತ ಇಲ್ಲಿ ವಿಶ್ರಮಿಸಿದ್ದ', 'ಲಕ್ಷಣ ಇಲ್ಲಿ ಸ್ನಾನ ಮಾಡಿದ್ದ', ಈ ರೀತಿಯ ಹಲವು ಕತೆಗಳಿರುತ್ತವೆ. ಎಲ್ಲರೊಳಗೂ ಆ ಪಾತ್ರಗಳ ಬೆರೆತುಬಿಟ್ಟಿವೆ. ಅವುಗಳಲ್ಲಿನ ಪಾತ್ರಗಳನ್ನು ಪ್ರತಿದಿನ ನಮಗೆ ಗೊತ್ತಿಲ್ಲದೆ ನೆನೆಯುತ್ತಿರುತ್ತೆವೆ. ಇದೇನಿದು 'ಹನುಮಂತನ ಬಾಲ ಇದ್ದ ಹಾಗೇ ಇದೆ', 'ನಿಂದೊಳ್ಳೆ ರಾಮಾಯಣ ಆಯ್ತು', 'ನೀನ್ ಬಿಡಪ್ಪ ಕೃಷ್ಣ ಪರಮಾತ್ಮ', 'ಶಬರಿ ಕಾದಂಗೆ ಕಾದನಲ್ಲೊ' ಹೀಗೆ ಒಂದಿಲ್ಲೊಂದು ಕಡೆ ನಮಗರಿವಿಲ್ಲದಂತೆ ಆ ಪಾತ್ರಗಳನ್ನು ಸ್ಮರಿಸುತ್ತೆವೆ. ಚಿಕ್ಕಂದಿನಿಂದಲೂ ಈ ಮಹಾಕಾವ್ಯಗಳ ಕಥೆಗಳೆಂದರೆ ಒಂದು ರೀತಿಯ ಆಕರ್ಷಣೆ ನನಗೆ, ಟಿವಿಯಲ್ಲಿ ಬರುತ್ತಿದ್ದ ಧಾರಾವಾಹಿಗಳನ್ನು ಬೆರಗಾಗಿ ನೋಡುತ್ತಿದ್ದೆ. ಪತ್ರಿಕೆಗಳಲ್ಲಿ ಬರುವ ಈ ಕೃತಿಗಳನ್ನಾಧರಿಸಿದ ಕಿರುಗತೆಗಳನ್ನು ಆಸಕ್ತಿಯಿಂದ ಓದುತ್ತಿದ್ದೆ, 'ಸಂಪೂರ್ಣ ರಾಮಯಣ', 'ಸಂಪೂರ್ಣ ಮಹಾಭಾರತ' ಎಂಬ ಕೆಲ ಪುಸ್ತಕಗಳನ್ನು ಹೈಸ್ಕೂಲಿನಲ್ಲಿ ಓದಿದ್ದೆ, ಇತ್ತೀಚೆಗಂತೂ ತುಂಬಾ ವಿವಾದಗಳು, ಮತದ್ವೇಷಗಳನ್ನು ಕಂಡು ಮತ್ತೊಮ್ಮೆ ರಾಮಾಯಣವನ್ನು ಓದಬೇಕೆನಿಸಿತು, ಆದರೆ ಕುಮಾರವ್ಯಾಸ ಹೇಳುವಂತೆ 'ತಿಣುಕಿದನು ಫಣಿರಾಯ' ಎನ್ನುವಷ್ಟು ರಾಮಯಣಾಧ...
ಇಂದಿನ ಯುವ ಚಿಂತನೆಗಳಲ್ಲಿ ಆಸ್ತಿಕತೆ-ನಾಸ್ತಿಕತೆಯ ಬಗೆಗಿನ ದ್ವಂದ್ವ ಇದ್ದೇ ಇರುತ್ತದೆ. ಅಧ್ಯಯನ, ಅನುಭವಗಳು ಈ ದ್ವಂದ್ವವ ಮೀರಲು ಸಹಕಾರಿ. ನಾನು ನನ್ನ ಪಿಯುಸಿಯ ದಿನಗಳಲ್ಲಿ ವೈಚಾರಿಕತೆ ಎಂದರೆ ಆಸ್ತಿಕತೆಯ ವಿರುದ್ಧವಿರುವುದು, ಸಂಪ್ರದಾಯಗಳ ಮೀರಿ ನಡೆಯುವುದು ಎಂದು ಬಲವಾಗಿ ನಂಬಿದ್ದೆ. ಆದರೆ ನನ್ನ ಈ ನಂಬಿಕೆಯನ್ನು ಸಡಿಲಗೊಳಿಸಿದ್ದು ಕುವೆಂಪು ಅವರ ವಿಚಾರಧಾರೆಗಳು. ಆಗ ಪಿಯುಸಿಯ ಕನ್ನಡ ಪಠ್ಯದಲ್ಲಿ ಪೂರ್ಣಚಂದ್ರ ತೇಜಸ್ವಿ ಅವರು ಬರೆದ 'ಅಣ್ಣನ ನೆನಪು' ಕೃತಿಯ ಒಂದು ಭಾಗ ಇತ್ತು. ಅದರಲ್ಲಿ ತೇಜಸ್ವಿ ಅವರು ಬರೆಯುವಂತೆ, ಕುವೆಂಪು ತಮ್ಮ ಜೀವನದಲ್ ಲಿ ಯಾವ ದೇವಸ್ಥಾನಗಳಿಗೂ ಕಾಲಿಡಲಿಲ್ಲ. ಆದರೆ ನಿತ್ಯವೂ ಮನೆಯಲ್ಲಿ ತಪ್ಪದೇ ಪೂಜೆ ಮಾಡುತ್ತಿದ್ದರು. ರಾಮಕೃಷ್ಣ ಪರಮಹಂಸರ ಶಿಷ್ಯರಾದ ಸ್ವಾಮಿ ಶಿವಾನಂದರಿಂದ ದೀಕ್ಷೆ ತೆಗೆದುಕೊಂಡಿದ್ದರು. ಈ ವಿಚಾರಗಳು ನನ್ನ ಚಿಂತನೆಯನ್ನು ಬದಲಿಸಿತು. ಕುವೆಂಪು ಅವರು ವೈಚಾರಿಕ ಆಸ್ತಿಕರಾಗಿದ್ದರು ಎಂದರೆ ತಪ್ಪಾಗಲಾರದೇನೊ. ಕುವೆಂಪು ಅವರು ಮೌಢ್ಯಗಳನ್ನು ವಿರೋಧಿಸಿತ್ತಿದ್ದರೆ ಹೊರತು ನಂಬಿಕೆಗಳನ್ನಲ್ಲ. ಮೊನ್ನೆ ನನ್ನ ಮಿತ್ರನೊಬ್ಬ ನನಗೆ ಕೇಳಿದ "ನೀನು ಕುವೆಂಪು ಆಸ್ತಿಕರು ಅಂತೀಯ ಆದ್ರೆ ಅವರೆ 'ನೂರು ದೇವರುಗಳ ನೂಕಾಚೆ ದೂರ' ಅಂತ ಬರೆದಿದ್ದಾರಲ್ಲ" ಅಂತ. ಅದಕ್ಕೆ ನಾನಂದೆ "ಹೌದು ಅವರು ಹಾಗೆ ಬರೆದಿದ್ದಾರೆ, ...
Comments
Post a Comment