ಬಸ್ಸಿನ ಪಯಣದಿ....

ಹೇ ಹುಡುಗಿ

ಬಸ್ಸಿನ ಪಯಣದಿ
ನಿನ್ನ ಕೈ ಬೆರಳೆನ್ನ ಎದೆಗೆ ತಾಕಿ
ನನ್ನ ಪಯಣದ
ಗಮ್ಯವೆ ನನಗೆ ಮರೆತು ಹೋಗಿದೆ

ನಿನ್ನ ಸಾಮೀಪ್ಯದ
ಈ ಒಂದು ಕ್ಷಣ ಇಪ್ಪತ್ತು ವರ್ಷಗಳ
ನನ್ನ ಗತವನ್ನೆಲ್ಲಾ
ಮನದಿಂದ ಅಳಿಸಿ, ನಿನ್ನ ಮಾತ್ರವೇ ತುಂಬಿದೆ

ಈ ಒಂದು ಅರೆ ಘಳಿಗೆ
ಮರೆಯದ ಸುಂದರ ರಸ ಘಳಿಗೆ
ಹೀಗೆ ಇದ್ದರೆ ಪ್ರತಿ ಘಳಿಗೆ
ಸಾಕೆಂದು ಹೃದಯ ಕ್ಷಣಕ್ಷಣಕ್ಕೂ ಮಿಡಿಯುತಿದೆ
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ