ಗೆಳತಿ

ಗೆಳತಿ
ಮರಳ ಹಾಸಿನ ಸಮುದ್ರ ತಟದಲಿ
ಹಕ್ಕಿಗಳ ಸರಿಗಮ ಹೆಚ್ಚಿತು ಕ್ಷಣದಲಿ
ಪ್ರಕೃತಿಯ ಸಂಭ್ರಮ ಚೈತ್ರದ ತೆರದಲಿ
ನಿನ್ನ ಹೆಜ್ಜೆ ಗೆಜ್ಜೆಯ ನಾದ ಕೇಳುತಲಿ
ಉಕ್ಕಿ ಉಕ್ಕಿ ಬಂದಿತು ಕಡಲು
ನಿನ್ನನು ಒಮ್ಮೆ ಸ್ಪರ್ಶಿಸಲು
ಬಿಕ್ಕಿ ಬಿಕ್ಕಿ ಅಳುತಿದೆ ಮುಗಿಲು
ನಿನ್ನ ಸನಿಹ ಅಸಾಧ್ಯ ಎನಲು
ಸುಳಿದು ಸೂಸಿ ಬಂದಿತು ತಂಗಾಳಿ
ನಿನ್ನ ಹೆಸರು ಉಸುರಿದ್ದು ಕೇಳಿ
ಒಲವ ಗಿಳಿ ಬಂದಿತೆನ್ನ ಎದೆಯ ಸೀಳಿ
ನಿನ್ನ ನಗುವಿನ ಸದ್ದು ಬಂದಿದ್ದು ಕೇಳಿ
~ಪ್ರಕಾಶ್

Comments

Popular posts from this blog

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ

ಶರೀಫರು ಬರೆದ ಪ್ರಾಕೃತ ಶಿವಪರಾಧ ಸ್ತೋತ್ರ

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ