ಗೆಳತಿ ನಿನ್ನಗಲಿಕೆ.....

   
     ನಲುಗಿ ಹೋಗಿರುವೆ
     ನಿನ್ನ ನೆನಪುಗಳ ದಾಳಿಯಿಂದ
     ಅಣುಸ್ಫೊಟವಾದ ಹಿರೋಷಿಮಾದಂತೆ
   
     ನಡುಗುತ ಕುಳಿತಿರುವೆ
     ನನ್ನೆದೆಯ ಶೋಕದ ಚಳಿಗೆ
     ಮಳೆಗೆ ತತ್ತರಿಸಿದ ಚೆನ್ನೈನಂತೆ
   
     ಎದುರಿಸಲಾಗದೆ ನಿಂತಿರುವೆ
     ನೀ ದೂರಾದ ವಾರ್ತೆ ತಂದ ಗಾಳಿಗೆ
     ಚಂಡಮಾರುತಕ್ಕೆ ಸಿಕ್ಕ ನಗರದಂತೆ
   
    ಹೆದರಿ ಕುಗ್ಗಿರುವೆ
    ನೀನಿಲ್ಲದ ಭವಿಷ್ಯದ ಕಲ್ಪನೆಯಿಂದ
    ಉಗ್ರರ ದಾಳಿಗೊಳಗಾದ ಮುಂಬೈನಂತೆ.
    ~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ