ಅಮವಾಸ್ಯೆ..


ಮುಗಿಲೂರಿನ ತುಂಬ
ಚುಕ್ಕಿ ದೀಪಗಳ ತುಂಬು ರಂಗೋಲಿ
ಮಡಿದಿದ್ದ ಚಂದಿರನ
ನೆನಪಿನಲಿ ಸಲ್ಲಿಸುತ ಶ್ರದ್ದಾಂಜಲಿ

ಗೂಬೆಗಳು ಕೂಗುತಿವೆ,
ಹಕ್ಕಿಗಳು ಮೌನ ಹೊದ್ದಿವೆ  ಶೋಕದಲಿ
ಕಂಬನಿ ಮಿಡಿಯುತಿದೆ ತಂಗಾಳಿ
ಶಶಿಯ ತವರೂರಾದ ವಸುಧೆಯಲಿ

ಭೊರ್ಗರೆವ ಕಡಲು
ಶಾಂತವಾಗಿ ಮಲಗಿದೆ ಬೇಸರದಲಿ
ಮಲಗಿದೆ ಮಗುವೊಂದು
ಮತ್ತೆ ಬರುವ ಚಂದ್ರಮ ಎಂಬ ಕನಸಲಿ
~ಪ್ರಕಾಶ್

Comments

Popular posts from this blog

ಕುವೆಂಪುರವರ, ಜನಪ್ರಿಯ ವಾಲ್ಮೀಕಿ ರಾಮಾಯಣ

ಶ್ರೀಮನ್ನಿಜಗುಣರು ರಚಿಸಿರುವ ಶಂಭುಲಿಂಗಸ್ತೂತ್ರ

ಕುವೆಂಪು, ಆಸ್ತಿಕತೆ ಮತ್ತು ವೈಚಾರಿಕತೆ